Jeremiah 31:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪ್ರತಿಯೊಬ್ಬನು ತನ್ನ ಪಾಪದ ನಿಮಿತ್ತವೇ ಸಾಯುವನು. ಹುಳಿದ್ರಾಕ್ಷಿಯನ್ನು ತಿಂದವನೇ ಅದರ ರುಚಿಯನ್ನು ಕಾಣುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಾಯತಕ್ಕವನು ತನ್ನ ತನ್ನ ದೋಷದಿಂದ ಸಾಯುವನು. ಹುಳಿದ್ರಾಕ್ಷಿಯನ್ನು ತಿನ್ನುವವನ ಹಲ್ಲುಗಳೇ ಚಳಿತುಹೋಗುವವು” ಎಂದು ಹೇಳುತ್ತಾನೆ.
Kannada BSI Bible 2016
ಇಸ್ರಾ ಯೇಲಿನ ಮಕ್ಕಳೂ ಯೆಹೂದದ ಮಕ್ಕಳೂ ತಮ್ಮ ಯೌವನದಾರಭ್ಯ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ್ದಾರೆ; ಇಸ್ರಾಯೇಲಿನ ಮಕ್ಕಳು ತಮ್ಮ ಕೈ ಕೆಲಸಗಳಿಂದ ನನಗೆ ಕೋಪೋದ್ರೇಕವನ್ನೇ ಎಬ್ಬಿಸಿದ್ದಾರೆ ಎಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಾಯತಕ್ಕವನು ತನ್ನ ತನ್ನ ದೋಷದಿಂದ ಸಾಯುವನು. ಹುಳಿದ್ರಾಕ್ಷೆಯನ್ನು ತಿನ್ನುವವನ ಹಲ್ಲುಗಳೇ ಚಳಿತುಹೋಗುವವು.
Kannada Bible (KNCL) BSI 2016
ಏಕೆಂದರೆ ಸಾಯತಕ್ಕವನು ತನ್ನ ಸ್ವಂತ ದೋಷಕ್ಕಾಗಿಯೇ ಸಾಯುವನು. ಹುಳಿದ್ರಾಕ್ಷೆಯನ್ನು ತಿಂದವನ ಹಲ್ಲೇ ಚಳಿತುಹೋಗುವುದು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಒಬ್ಬೊಬ್ಬನು ಸ್ವಂತ ಪಾಪಕ್ಕಾಗಿ ಸಾಯುವನು. ಹುಳಿ ದ್ರಾಕ್ಷಿಯನ್ನು ತಿಂದ ಮನುಷ್ಯನು ಯಾವನೋ, ಅವನ ಹಲ್ಲುಗಳು ಚಳಿತು ಹೋಗುವುವು.”