Jeremiah 31:37 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಹೀಗೆನ್ನುತ್ತಾನೆ: “ನಾನು ಇಸ್ರೇಲ್ ಸಂತತಿಯವರನ್ನು ತಿರಸ್ಕರಿಸುವುದೇ ಇಲ್ಲ. ಜನರಿಗೆ ಆಕಾಶಮಂಡಲವನ್ನು ಅಳೆಯಲೂ ಭೂಗರ್ಭದ ಪರಿಪೂರ್ಣ ರಹಸ್ಯವನ್ನು ಅರಿಯಲೂ ಸಾಧ್ಯವೇ? ಒಂದುವೇಳೆ ಸಾಧ್ಯವಾದರೆ, ಇಸ್ರೇಲರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಇಸ್ರೇಲರನ್ನು ನಿರಾಕರಿಸಿದರೂ ನಿರಾಕರಿಸಘಹುದು.” ಇದು ಯೆಹೋವನ ಸಂದೇಶ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು, “ಮೇಲೆ ಆಕಾಶಮಂಡಲವನ್ನು ಅಳೆಯಬಹುದಾದರೆ, ಕೆಳಗೆ ಭೂಮಂಡಲದ ಅಸ್ತಿವಾರವನ್ನು ಪರೀಕ್ಷಿಸಬಹುದಾದರೆ ಆಗ ಇಸ್ರಾಯೇಲ್ ವಂಶವು ಮಾಡಿರುವ ಸಕಲ ದುಷ್ಕೃತ್ಯಗಳ ನಿಮಿತ್ತ, ನಾನು ಆ ವಂಶವನ್ನು ನಿರಾಕರಿಸಿಬಿಡುವೆನು” ಎಂದು ಹೇಳುತ್ತಾನೆ.
Kannada BSI Bible 2016
ಇಗೋ, ನಾನು ನನ್ನ ಕೋಪ ದಲ್ಲಿಯೂ ಉಗ್ರದಲ್ಲಿಯೂ ಮಹಾ ರೌದ್ರದಲ್ಲಿಯೂ ಅವರನ್ನು ಓಡಿಸಿಬಿಟ್ಟ ಸಮಸ್ತ ದೇಶಗಳೊಳಗಿಂದ ಅವರನ್ನು ಕೂಡಿಸಿ ಈ ಸ್ಥಳಕ್ಕೆ ತಿರಿಗಿ ತಂದು ಭದ್ರವಾಗಿ ವಾಸಿಸುವಂತೆ ಮಾಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಹೀಗೆನ್ನುತ್ತಾನೆ - ಮೇಲೆ ಆಕಾಶಮಂಡಲವನ್ನು ಅಳೆಯಬಹುದಾದರೆ ಕೆಳಗೆ ಭೂಮಂಡಲದ ಅಸ್ತಿವಾರವನ್ನು ಪರೀಕ್ಷಿಸಬಹುದಾದರೆ ಆಗ ಇಸ್ರಾಯೇಲ್ ವಂಶವು ಮಾಡಿರುವ ಸಕಲ ದುಷ್ಕೃತ್ಯಗಳ ನಿವಿುತ್ತ ನಾನು ಆ ವಂಶವನ್ನು ನಿರಾಕರಿಸಿಬಿಟ್ಟೇನು.
Kannada Bible (KNCL) BSI 2016
ಮೇಲಿನ ಆಕಾಶಮಂಡಲವನ್ನು ಅಳೆಯಬಹುದಾದರೆ ಕೆಳಗಿನ ಭೂಮಂಡಲದ ವಿಸ್ತಾರವನ್ನು ಪರೀಕ್ಷಿಸಬಹುದಾದರೆ ಆಗ ಮಾತ್ರ ಅದರ ದುಷ್ಕೃತ್ಯಗಳನ್ನು ಮುನ್ನಿಟ್ಟು ಇಸ್ರಯೇಲ್ ವಂಶವನ್ನು ನಾನು ನಿರಾಕರಿಸಿಬಿಡಲು ಸಾಧ್ಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮೇಲಿನ ಆಕಾಶಮಂಡಲವನ್ನು ಅಳೆಯಬಹುದಾದರೆ, ಕೆಳಗಿನ ಭೂಮಂಡಲದ ವಿಸ್ತಾರವನ್ನು ಪರೀಕ್ಷಿಸಬಹುದಾದರೆ, ಆಗ ಮಾತ್ರ ಅದರ ದುಷ್ಕೃತ್ಯಗಳನ್ನು ಮುನ್ನಿಟ್ಟು, ಇಸ್ರಾಯೇಲ್ ವಂಶವನ್ನು ನಾನು ನಿರಾಕರಿಸಿ ಬಿಡಲು ಸಾಧ್ಯ,” ಎಂದು ಯೆಹೋವ ದೇವರು ಹೇಳುತ್ತಾರೆ.