Jeremiah 32:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಕ್ರಯಪತ್ರಕ್ಕೆ ಸಹಿ ಹಾಕಿದೆನು. ಕ್ರಯಪತ್ರದ ಒಂದು ಪ್ರತಿಗೆ ರುಜು ಮಾಡಿಸಿದೆನು. ಇದಕ್ಕೆ ಸಾಕ್ಷಿಯಾಗಿ ಕೆಲಜನರನ್ನು ಕರೆಸಿದೆನು. ನಾನು ಬೆಳ್ಳಿಯನ್ನು ತಕ್ಕಡಿಯಲ್ಲಿ ತೂಕಹಾಕಿ ಕೊಟ್ಟೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪತ್ರಕ್ಕೆ ಸಹಿ ಹಾಕಿ ಮುಚ್ಚಿ ಆ ಮುಚ್ಚಳಕ್ಕೆ ಸಾಕ್ಷಿಗಳನ್ನು ಹಾಕಿಸಿ, ತಕ್ಕಡಿಯಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು.
Kannada BSI Bible 2016
ಕರ್ತನು ಹೇಳುವದೇನಂದರೆ-- ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತೆಂದು ನೀವು ಹೇಳುವ ಈ ಸ್ಥಳದಲ್ಲಿಯೂ ಮನುಷ್ಯರೂ ನಿವಾಸಿಗಳೂ ಪಶುಗಳೂ ಇಲ್ಲದೆ ನಾಶವಾದ ಯೆಹೂ ದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಬೀದಿ ಗಳಲ್ಲಿಯೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಪತ್ರಕ್ಕೆ ರುಜು ಹಾಕಿ ಮುಚ್ಚಿ [ಮುಚ್ಚಳಕ್ಕೆ] ಸಾಕ್ಷಿಗಳನ್ನು ಹಾಕಿಸಿ ತ್ರಾಸಿನಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು.
Kannada Bible (KNCL) BSI 2016
ಪತ್ರಕ್ಕೆ ರುಜುಹಾಕಿ, ಮುದ್ರೆ ಒತ್ತಿ, ಸಾಕ್ಷಿಗಳನ್ನು ಹಾಕಿಸಿ, ತಕ್ಕಡಿಯಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆಹಾಕಿ, ಸಾಕ್ಷಿಗಳನ್ನಿಟ್ಟು, ಬೆಳ್ಳಿಯನ್ನು ತ್ರಾಸಿನಲ್ಲಿ ತೂಕಮಾಡಿದೆನು.