Jeremiah 32:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಅವುಗಳನ್ನು ಬಾರೂಕನ ಕೈಗೆ ಕೊಟ್ಟೆನು. ಬಾರೂಕನು ನೇರೀಯನ ಮಗನಾಗಿದ್ದನು. ನೇರೀಯನು ಮಹ್ಸೇಮನ ಮಗನಾಗಿದ್ದನು. ಮೊಹರು ಮಾಡಿದ ಕ್ರಯಪತ್ರದಲ್ಲಿ ನಾನು ಹೊಲವನ್ನು ಕ್ರಯಕ್ಕೆ ಕೊಂಡ ಎಲ್ಲಾ ಷರತ್ತುಗಳಿದ್ದವು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಮತ್ತು ಉಳಿದ ಸಾಕ್ಷಿಗಳು ಅಲ್ಲಿದ್ದಾಗಲೇ ನಾನು ಈ ಕ್ರಯಪತ್ರವನ್ನು ಬಾರೂಕನ ಕೈಗೆ ಕೊಟ್ಟೆನು. ಆ ಸಾಕ್ಷಿಗಳು ಸಹ ಈ ಕ್ರಯಪತ್ರಕ್ಕೆ ಸಹಿಹಾಕಿದ್ದರು. ಆ ಅಂಗಳದಲ್ಲಿ ಕುಳಿತ ಹಲವಾರು ಜನ ಯೆಹೂದ್ಯರು ನಾನು ಬಾರೂಕನ ಕೈಗೆ ಆ ಕ್ರಯಪತ್ರ ಕೊಡುವದನ್ನು ನೋಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆ ಕ್ರಯಪತ್ರಕ್ಕೆ ಸಹಿಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ, ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲಾ ಯೆಹೂದ್ಯರ ಎದುರಿನಲ್ಲಿ ಆ ಕ್ರಯಪತ್ರವನ್ನು ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆನು.
Kannada BSI Bible 2016
ಸೈನ್ಯಗಳ ಕರ್ತನು ಹೇಳುವದೇನಂದರೆ--ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ ಅದರ ಎಲ್ಲಾ ಪಟ್ಟಣಗಳಲ್ಲಿಯೂ ಇನ್ನು ಮೇಲೆ ತಮ್ಮ ಮಂದೆಗಳನ್ನು ಮಲಗಿಸುವ ಕುರುಬರ ನಿವಾಸಗಳು ಇರುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮ ಕಾರಾಗೃಹದ ಅಂಗಳದಲ್ಲಿ ಕೂತಿದ್ದ ಎಲ್ಲಾ ಯೆಹೂದ್ಯರ ಎದುರಿನಲ್ಲಿ ಆ ಕ್ರಯಪತ್ರವನ್ನು ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆನು.
Kannada Bible (KNCL) BSI 2016
ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆ. ನನ್ನ ಚಿಕ್ಕಪ್ಪನ ಮಗ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ, ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲ ಯೆಹೂದ್ಯರ ಎದುರಿನಲ್ಲಿ, ಆ ಕ್ರಯಪತ್ರವನ್ನು ಕೊಟ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಹ್ಸೇಯನ ಮೊಮ್ಮಗನೂ, ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆ. ನನ್ನ ಚಿಕ್ಕಪ್ಪನ ಮಗ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲ ಯೆಹೂದ್ಯರ ಎದುರಿನಲ್ಲಿ ಈ ಕ್ರಯಪತ್ರವನ್ನು ಕೊಟ್ಟೆ.