Jeremiah 32:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ‘ಕ್ರಯಪತ್ರದ ಎರಡೂ ಪ್ರತಿಗಳನ್ನು ಅಂದರೆ ರುಜುಮಾಡಿದ ಮತ್ತು ರುಜುಮಾಡದ ಪ್ರತಿಗಳನ್ನು ತೆಗೆದುಕೊಂಡು ಅವುಗಳು ಘಹುಕಾಲ ಉಳಿಯುವಂತೆ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಮುಚ್ಚಿಡು.’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀನು ಈ ಕ್ರಯಪತ್ರಗಳನ್ನು, ಅಂದರೆ ಮುಚ್ಚಿದ ಪತ್ರವನ್ನೂ ಮತ್ತು ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಬಹು ದಿನ ಇರುವ ಹಾಗೆ ಅದನ್ನು ಮಡಿಕೆಯಲ್ಲಿ ಬಚ್ಚಿಡು.
Kannada BSI Bible 2016
ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಇಸ್ರಾಯೇಲಿನ ಮನೆಯವರ ಸಂಗಡಲೂ ಯೆಹೂದನ ಮನೆಯವರ ಸಂಗಡಲೂ ವಾಗ್ದಾನವನ್ನು ಮಾಡಿದಂತೆ ಒಳ್ಳೇ ಮಾತನ್ನು ನೆರೆವೇರಿ ಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನೀನು ಈ ಕ್ರಯಪತ್ರಗಳನ್ನು, ಅಂದರೆ ಮುಚ್ಚಿದ ಪತ್ರವನ್ನೂ ಮುಚ್ಚಳದ ಪತ್ರವನ್ನೂ ತೆಗೆದುಕೊಂಡು ಬಹು ದಿವಸ ಇರುವ ಹಾಗೆ ಮಡಿಕೆಯಲ್ಲಿ ಬಚ್ಚಿಡು.
Kannada Bible (KNCL) BSI 2016
“ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: ನೀನು ಈ ಕ್ರಯಪತ್ರಗಳನ್ನು, ಅಂದರೆ ಮುದ್ರಿತಪತ್ರವನ್ನೂ ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಒಂದು ಮಡಕೆಯಲ್ಲಿ ಬಚ್ಚಿಡು. ಅದು ಬಹಳ ದಿನ ಸುರಕ್ಷಿತವಾಗಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. ಈ ಪತ್ರಗಳನ್ನೂ, ಮುದ್ರೆ ಹಾಕಿದ ಈ ಕ್ರಯ ಪತ್ರವನ್ನೂ, ತೆರೆದಿರುವ ಈ ಪತ್ರವನ್ನೂ ತೆಗೆದು, ಅವು ಬಹು ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.