Jeremiah 32:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನೇ, ನೀನು ಸಾವಿರಾರು ಜನರಿಗೆ ನಂಬಿಗಸ್ತನಾಗಿಯೂ ಕರುಣಾಮಯಿಯಾಗಿಯೂ ಇರುವೆ. ಆದರೆ ತಂದೆಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಶಿಕ್ಷೆಯನ್ನು ವಿಊಸುವಾತನೂ ನೀನೇ. ಮಹತಬವುಳ್ಳವನೇ, ಪರಾಕ್ರಮಿಯಾದ ದೇವರೇ, ಸರ್ವಶಕ್ತನಾದ ಯೆಹೋವನು ಎಂಬುದೇ ನಿನ್ನ ನಾಮಧೇಯ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಸಾವಿರಾರು ತಲೆಗಳವರೆಗೆ ದಯೆತೋರಿಸುವವನೂ, ತಂದೆಗಳ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವವನೂ ಆಗಿದ್ದೀ. ನೀನು ಮಹಾ ಪರಾಕ್ರಮಿಯಾದ ದೇವರು; ಸೇನಾಧೀಶ್ವರನಾದ ಯೆಹೋವನೆಂಬುದು ನಿನ್ನ ಹೆಸರಾಗಿದೆ.
Kannada BSI Bible 2016
ಯಾಜಕರಿಗೂ ಲೇವಿಯರಿಗೂ ನಿತ್ಯವಾಗಿ ನನ್ನ ಮುಂದೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಆಹಾರದ ಅರ್ಪಣೆಗಳನ್ನು ಬೆಂಕಿಯಿಂದ ಅರ್ಪಿಸುವವದಕ್ಕೂ ಬಲಿಗಳನ್ನು ಮಾಡುವದಕ್ಕೂ ಮನುಷ್ಯನು ಇಲ್ಲದೆ ಹೋಗುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಸಾವಿರಾರು ತಲೆಗಳವರೆಗೆ ದಯೆತೋರಿಸುವವನೂ ತಂದೆಗಳ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವವನೂ ಆಗಿದ್ದೀ; ನೀನು ಮಹಾ ಪರಾಕ್ರವಿುಯಾದ ದೇವರು; ಸೇನಾಧೀಶ್ವರನಾದ ಯೆಹೋವನೆಂಬದು ನಿನ್ನ ನಾಮಧೇಯ;
Kannada Bible (KNCL) BSI 2016
ನೀವು ಸಾವಿರಾರು ತಲಾಂತರಗಳವರೆಗೂ ದಯೆತೋರುವವರು. ಆದರೆ ಹೆತ್ತವರ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವವರು. ನೀವು ಮಹಾಪರಾಕ್ರಮಿಯಾದ ದೇವರು, ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದು ನಿಮ್ಮ ನಾಮಧೇಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಸಾವಿರಾರು ತಲೆಗಳವರೆಗೆ ಪ್ರೀತಿ, ದಯೆತೋರಿಸಿ, ತಂದೆಗಳ ಅಕ್ರಮಗಳನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸುರಿಸುವವರಾಗಿದ್ದೀರಿ. ಮಹತ್ವವುಳ್ಳವರೂ, ಪರಾಕ್ರಮವುಳ್ಳ ದೇವರೂ, ಸೇನಾಧೀಶ್ವರ ಯೆಹೋವ ದೇವರೂ ಎಂಬುದು ನಿಮ್ಮ ಹೆಸರು.