Jeremiah 32:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನನ್ನ ಒಡೆಯನಾದ ಯೆಹೋವನೇ, ಆ ದುರ್ಘಟನೆಗಳೆಲ್ಲಾ ಸಂಭವಿಸುತ್ತಿವೆ. ಆದರೆ ಈಗ ನೀನು ‘ಯೆರೆಮೀಯನೇ, ಬೆಳ್ಳಿಯನ್ನು ಕೊಟ್ಟು ಹೊಲವನ್ನು ಕೊಂಡುಕೋ ಮತ್ತು ಈ ಖರೀದಿಗೆ ಸಾಕ್ಷಿಯಾಗಿ ಕೆಲವು ಜನರನ್ನು ಆರಿಸಿಕೋ’ ಎಂದು ಹೇಳುತ್ತಿರುವಿಯಲ್ಲ. ಬಾಬಿಲೋನಿನ ಸೈನ್ಯವು ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿ ನಿಂತಿರುವಾಗ ನೀನು ಇದನ್ನು ಹೇಳುತ್ತಿರುವಿಯಲ್ಲ, ಏಕೆ? ಏಕೆ ನಾನು ಹಣವನ್ನು ಹೀಗೆ ವ್ಯರ್ಥವಾಗಿ ಕಳೆದುಕೊಳ್ಳಬೇಕು?”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನೇ, ನೀನು ನನಗೆ, ‘ಸಾಕ್ಷಿಗಳನ್ನು ಕರೆಯಿಸಿ ಕ್ರಯಕೊಟ್ಟು ಹೊಲವನ್ನು ಕೊಂಡುಕೋ’ ಎಂದು ಅಪ್ಪಣೆಕೊಟ್ಟೆ; ನೋಡು, ಪಟ್ಟಣವು ಕಸ್ದೀಯರ ಕೈಸೇರಿದೆಯಲ್ಲಾ” ಎಂದು ವಿಜ್ಞಾಪನೆ ಮಾಡಿದೆನು.
Kannada BSI Bible 2016
ಕರ್ತನು ಹೀಗೆ ಹೇಳುತ್ತಾನೆ--ನನ್ನ ನಿಯಮವು ಹಗಲು ರಾತ್ರಿಯ ಸಂಗಡ ಇಲ್ಲದಿದ್ದರೆ ಭೂಮ್ಯಾಕಾಶಗಳ ಕಟ್ಟಳೆಗಳನ್ನು ನಾನು ಸ್ಥಾಪಿಸದಿ ದ್ದರೆ--ಆಗ ಯಾಕೋಬನ ಸಂತಾನವನ್ನೂ ನನ್ನ ಸೇವಕನಾದ ದಾವೀದನನ್ನೂ ಬೇಡವೆಂದು ಬಿಟ್ಟು ಅವನ ಸಂತಾನದಿಂದ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತಾನದ ಮೇಲೆ ಆಳುವವರನ್ನು ತಕ್ಕೊಳ್ಳದೆ ಇದ್ದೆನು; ಆದರೆ ನಾನು ಅವರ ಸೆರೆಯಿಂದ ಬಿಡಿಸಿ ಅವರನ್ನು ಕರುಣಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನಾದ ಯೆಹೋವನೇ, ನೀನು ನನಗೆ - ಸಾಕ್ಷಿಗಳನ್ನು ಕರೆಯಿಸಿ ಕ್ರಯಕೊಟ್ಟು ಹೊಲವನ್ನು ಕೊಂಡುಕೋ ಎಂದು ಅಪ್ಪಣೆಕೊಟ್ಟಿ; ನೋಡು, ಪಟ್ಟಣವು ಕಸ್ದೀಯರ ಕೈಸೇರಿದೆಯಲ್ಲಾ.
Kannada Bible (KNCL) BSI 2016
ದೇವರಾದ ಸರ್ವೇಶ್ವರಾ, ಸಾಕ್ಷಿಗಳನ್ನು ಕರೆಯಿಸಿ, ಕ್ರಯಕೊಟ್ಟು ಹೊಲವನ್ನು ಕೊಂಡುಕೊ ಎಂದು ನೀವು ನನಗೆ ಆಜ್ಞಾಪಿಸಿದಿರಿ. ಆದರೆ ನೋಡಿ, ನಗರವು ಬಾಬಿಲೋನಿಯರ ಕೈವಶವಾಗಲಿದೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೂ ಓ ಸಾರ್ವಭೌಮ ಯೆಹೋವ ದೇವರೇ, ನೀನು ನನಗೆ, ‘ಹೊಲವನ್ನು ಹಣಕ್ಕೆ ಕೊಂಡುಕೋ, ಸಾಕ್ಷಿಗಳನ್ನು ಇಡು,’ ಎಂದು ಹೇಳಿದ್ದೀ. ಆದರೂ ಪಟ್ಟಣವು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಲಾಗಿದೆಯಲ್ಲಾ?”