Jeremiah 32:33 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಆ ಜನರು ಸಹಾಯಕೋರಿ ನನ್ನಲ್ಲಿಗೆ ಬರಙೇಕಾಗಿತ್ತು. ಆದರೆ ಅವರು ನನಗೆ ವಿಮುಖರಾದರು. ನಾನು ಮತ್ತೆಮತ್ತೆ ಅವರಿಗೆ ಬುದ್ಧಿಕಲಿಸುವ ಪ್ರಯತಐ ಮಾಡಿದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ನಾನು ಅವರನ್ನು ತಿದ್ದುವ ಪ್ರಯತಐ ಮಾಡಿದೆ, ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ನನಗೆ ಮುಖಕೊಡದೆ ಬೆನ್ನುಮಾಡಿದ್ದಾರೆ; ನಾನು ಎಡೆಬಿಡದೆ ಅವರಿಗೆ ಬೋಧಿಸುತ್ತಾ ಬಂದರೂ ಅವರು ಉಪದೇಶವನ್ನು ಹೊಂದಲಿಲ್ಲ ಮತ್ತು ನನಗೆ ಕಿವಿಗೊಡಲೇ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ನನಗೆ ಮುಖಕೊಡದೆ ಬೆನ್ನುಮಾಡಿದ್ದಾರೆ; ನಾನು ಎಡೆಬಿಡದೆ ಅವರಿಗೆ ಬೋಧಿಸುತ್ತಾ ಬಂದರೂ ಅವರು ಉಪದೇಶವನ್ನು ಹೊಂದಲೊಲ್ಲದೆ ನನಗೆ ಕಿವಿಗೊಡಲೇ ಇಲ್ಲ.
Kannada Bible (KNCL) BSI 2016
ಅವರು ನನಗೆ ಅಭಿಮುಖರಾಗದೆ ಬೆನ್ನುಮಾಡಿದ್ದಾರೆ. ನಾನು ಅವರಿಗೆ ಎಡೆಬಿಡದೆ ಬೋಧಿಸುತ್ತಾ ಬಂದರೂ ನನ್ನ ಉಪದೇಶವನ್ನು ಅಂಗೀಕರಿಸಲಿಲ್ಲ, ನನಗೆ ಕಿವಿಗೊಡಲೂ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ನಾನು ಅವರಿಗೆ ಬೋಧಿಸಿದೆನು. ಪುನಃ ಬೋಧಿಸಿದೆನು. ಆದರೂ ಉಪದೇಶ ಹೊಂದುವುದಕ್ಕೆ ಅವರು ಕಿವಿಗೊಡಲಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ.