Jeremiah 32:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಾಬಿಲೋನಿನ ರಾಜನು ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು. ನಾನು ಅವನನ್ನು ದಂಡಿಸುವವರೆಗೆ ಚಿದ್ಕೀಯನು ಅಲ್ಲಿರುವನು. ನೀವು ಕಸ್ದೀಯರೊಡನೆ ಯುದ್ಧ ಮಾಡಿದರೂ ನಿಮಗೆ ಜಯವಾಗದು.”‘ ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು, ನಾನು ಅವನಿಗೆ ದಯೆತೋರಿಸುವ ತನಕ ಅಲ್ಲೇ ಇರುವನು. ನೀವು ಕಸ್ದೀಯರೊಡನೆ ಯುದ್ಧಮಾಡಿದರೂ ನಿಮಗೆ ಜಯವಾಗದು; ಇದು ಯೆಹೋವನ ನುಡಿ ಎಂಬುದಾಗಿ ಏಕೆ ನುಡಿಯುತ್ತೀ?’” ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದ್ದನು.
Kannada BSI Bible 2016
ಅವರು ಕಸ್ದೀಯರ ಸಂಗಡ ಯುದ್ಧಮಾಡುವದಕ್ಕೂ ನಾನು ನನ್ನ ಕೋಪದಲ್ಲಿಯೂ ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವದಕ್ಕೂ ಬರುತ್ತಾರೆ; ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅದರ ಸಮಸ್ತ ಕೆಟ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಅರಸನು ಚಿದ್ಕೀಯನನ್ನು ಬಾಬೆಲಿಗೆ ಒಯ್ದುಕೊಂಡುಹೋಗುವನು, ನಾನು ಅವನಿಗೆ ದಯೆತೋರಿಸುವ ತನಕ ಅಲ್ಲೇ ಇರುವನು; ನೀವು ಕಸ್ದೀಯರೊಡನೆ ಯುದ್ಧಮಾಡಿದರೂ ನಿಮಗೆ ಜಯವಾಗದು; ಇದು ಯೆಹೋವನ ನುಡಿ ಎಂಬದಾಗಿ ಏಕೆ ನುಡಿಯುತ್ತೀ ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದ್ದನು.
Kannada Bible (KNCL) BSI 2016
ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ಕೊಂಡು ಒಯ್ಯುವನು. ನಾನು ಅವನಿಗೆ ದಯೆತೋರುವ ತನಕ ಅಲ್ಲೇ ಇರುವನು. ನೀವು ಬಾಬಿಲೋನಿಯರೊಡನೆ ಯುದ್ಧಮಾಡಿದರೂ ಜಯವಾಗದು. ಇದು ಸರ್ವೇಶ್ವರನ ನುಡಿ’ ಎಂದು ಹೇಳುತ್ತಿರುವೆ, ಏಕೆ?” ಎಂದು ಆಪಾದಿಸಿ ಸೆರೆಯಲ್ಲಿ ಇಟ್ಟಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ಕೊಂಡು ಒಯ್ಯುವನು. ನಾನು ಅವನಿಗೆ ದಯೆತೋರಿಸುವವರೆಗೂ ಅವನು ಅಲ್ಲಿಯೇ ಇರುವನು. ನೀವು ಬಾಬಿಲೋನಿಯರೊಡನೆ ಯುದ್ಧಮಾಡಿದರೂ ಜಯವಾಗದು. ಇದು ಯೆಹೋವ ದೇವರ ನುಡಿ,’ ಎಂದು ಹೇಳುತ್ತಿರುವೆ, ಏಕೆ?” ಎಂದು ಆಪಾದಿಸಿ ಸೆರೆಯಲ್ಲಿ ಇಟ್ಟಿದ್ದನು.