Jeremiah 33:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“‘ಜೆರುಸಲೇಮಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ನಾನು ಅವರ ಮೇಲೆ ಕೋಪಗೊಂಡಿದ್ದೇನೆ; ಅವರಿಗೆ ವಿರುದ್ಧವಾಗಿದ್ದೇನೆ. ನಾನು ಅಲ್ಲಿ ಘಹಳ ಜನರನ್ನು ಕೊಂದುಹಾಕುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡಲು ಬರುವುದು. ಜೆರುಸಲೇಮಿನ ಮನೆಗಳಲ್ಲಿ ಅನೇಕಾನೇಕ ಮೃತದೇಹಗಳು ಕಣ್ಣಿಗೆ ಬೀಳುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಊರಿನವರು ಕಸ್ದೀಯರನ್ನು ಪ್ರತಿಭಟಿಸುವುದಕ್ಕೆ ಹೊರಟರೆ ಏನು? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರು; ಇವರ ಅಧರ್ಮವನ್ನು ಕಂಡು ಈ ಪಟ್ಟಣಕ್ಕೆ ವಿಮುಖನಾಗಿ ಕೋಪ ರೋಷಭರಿತನಾದ ನಾನೇ ಇವರನ್ನು ಹತಿಸುವೆನು.
Kannada BSI Bible 2016
ಸಮಾಧಾನದಲ್ಲಿ ಸಾಯುವಿ; ಹಿಂದೆ ಇದ್ದ ಪೂರ್ವದ ಅರಸನಾದ ನಿನ್ನ ಪಿತೃಗಳನ್ನು ಸುಟ್ಟ ಪ್ರಕಾರ ನಿನಗೋಸ್ಕರ (ಸುಗಂಧ ಗಳನ್ನು) ಸುಡುವರು; ಹಾ, ಒಡೆಯನೇ, ಎಂದು ಹೇಳಿ ನಿನಗೋಸ್ಕರ ಗೋಳಾಡುವರು; ನಾನೇ ವಾಕ್ಯವನ್ನು ನುಡಿದಿದ್ದೇನೆಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಊರಿನವರು ಕಸ್ದೀಯರನ್ನು ಪ್ರತಿಭಟಿಸುವದಕ್ಕೆ ಹೊರಟರೆ ಏನು? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರು; ಇವರ ಅಧರ್ಮವನ್ನು ಕಂಡು ಈ ಪಟ್ಟಣಕ್ಕೆ ವಿಮುಖನಾಗಿ ಕೋಪರೋಷಭರಿತನಾದ ನಾನೇ ಇವರನ್ನು ಹತಿಸುವೆನು.
Kannada Bible (KNCL) BSI 2016
ಈ ಊರಿನವರು ಬಾಬಿಲೋನಿಯರ ವಿರುದ್ಧ ಕದನಕ್ಕೆ ಹೊರಟರೆ ಏನು ಪ್ರಯೋಜನ? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರಷ್ಟೆ. ಇವರ ಅಧರ್ಮದ ನಿಮಿತ್ತ ಈ ನಗರಕ್ಕೆ ವಿಮುಖವಾಗಿ, ಕಡುಕೋಪಾವೇಶನಾಗಿ ನಾನೇ ಇವರನ್ನು ಸದೆಬಡಿಯುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಕಸ್ದೀಯರ ಸಂಗಡ ಯುದ್ಧ ಮಾಡುವುದಕ್ಕೂ ನಾನು ನನ್ನ ಕೋಪದಲ್ಲಿಯೂ, ‘ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವುದಕ್ಕೂ ಬರುತ್ತಾರೆ. ಏಕೆಂದರೆ ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅವರ ಸಮಸ್ತ ದುಷ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.