Jeremiah 34:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನಿಮ್ಮ ಪೂರ್ವಿಕರಿಗೆ ‘ಪ್ರತಿ ಏಳು ವರ್ಷದ ಕೊನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಙೇಕು. ತನ್ನನ್ನು ನಿಮಗೆ ಮಾರಿಕೊಂಡ ಇಬ್ರಿಯ ಸಹೋದರ ನಿಮ್ಮಲ್ಲಿದ್ದರೆ ಅವನು ಆರು ವರ್ಷ ಸೇವೆಮಾಡಿದ ನಂತರ ಅವನನ್ನು ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ; ನನ್ನ ಕಡೆಗೆ ಗಮನ ಕೊಡಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ನಿಮ್ಮಲ್ಲಿ ಪ್ರತಿಯೊಬ್ಬನು ನಿಮಗೆ ಆರು ವರ್ಷಗಳ ಕಾಲ ದಾಸನಾಗಿದ್ದು ನಿಮಗೆ ಸೇವೆ ಮಾಡಿದ ಇಬ್ರಿಯನಾದ ಪ್ರತಿಯೊಬ್ಬ ಸಹೋದರನನ್ನು ಏಳನೆಯ ವರ್ಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಬೇಕು’ ಎಂದು ವಿಧಿಸಿ, ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆನಷ್ಟೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತಿಗೆ ಕಿವಿಗೊಡಲಿಲ್ಲ, ಕೇಳಲಿಲ್ಲ.
Kannada BSI Bible 2016
ರೇಕಾಬನ ಮಗನಾದ ಯೋನಾದಾಬನು ತನ್ನ ಕುಮಾರರಿಗೆ ಅವರು ದ್ರಾಕ್ಷಾರಸ ಕುಡಿಯದ ಹಾಗೆ ಆಜ್ಞಾಪಿಸಿದ ಮಾತುಗಳು ನಡಿಸಲ್ಪಟ್ಟಿವೆ; ಅವರು ಇಂದಿನ ವರೆಗೂ ಅದನ್ನು ಕುಡಿಯದೆ ತಮ್ಮ ತಂದೆಯ ಆಜ್ಞೆಗೆ ವಿಧೇಯರಾಗಿದ್ದಾರೆ; ಆದರೆ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತನಾಡಿದಾಗ್ಯೂ ನೀವು ನನಗೆ ಕಿವಿಗೊಡಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ತನ್ನನ್ನು ನಿಮಗೆ ಮಾರಿಕೊಂಡು ಆರು ವರುಷ ನಿಮ್ಮ ದಾಸನಾಗಿದ್ದ ಇಬ್ರಿಯನಾದ ಪ್ರತಿಯೊಬ್ಬ ಸಹೋದರನನ್ನು ಏಳನೆಯ ವರುಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಿರಿ ಎಂದು ವಿಧಿಸಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆನಷ್ಟೆ; ಆದರೆ ನಿಮ್ಮ ಪಿತೃಗಳು ನನ್ನ ಮಾತಿಗೆ ಕಿವಿಗೊಡಲಿಲ್ಲ, ಕೇಳಲಿಲ್ಲ.
Kannada Bible (KNCL) BSI 2016
ಒಬ್ಬ ಹಿಬ್ರಿಯನು ತನ್ನನ್ನೇ ನಿಮಗೆ ಮಾರಿಕೊಂಡು ಆರು ವರ್ಷ ನಿಮ್ಮ ಜೀತಗಾರನಾಗಿದ್ದರೆ ಅಂಥ ಸಹೋದರನನ್ನು ಏಳನೆಯ ವರ್ಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಿ ಎಂದು ವಿಧಿಸಿದ್ದೆ. ಆದರೆ ನಿಮ್ಮ ಪೂರ್ವಜರು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
‘ಏಳು ವರ್ಷಗಳ ಕಡೆಯಲ್ಲಿ ಒಬ್ಬೊಬ್ಬನು ತನಗೆ ಜೀತದಾಳಾಗಿದ್ದ ತನ್ನ ಸಹೋದರನಾದ ಹಿಬ್ರಿಯನನ್ನು ಕಳುಹಿಸಬೇಕೆಂದೂ, ಅವನು ನಿನಗೆ ಆರು ವರ್ಷ ಸೇವೆಮಾಡಿದ ಮೇಲೆ ನಿನ್ನ ಕಡೆಯಿಂದ ಅವನನ್ನು ಬಿಡುಗಡೆಯಾಗಿ ಕಳುಹಿಸಬೇಕು,’ ಎಂದು ಹೇಳಿದೆನು. ಆದರೆ ನಿಮ್ಮ ಪಿತೃಗಳು ನನ್ನ ಮಾತನ್ನು ಕೇಳಲಿಲ್ಲ. ಅವರು ಕಿವಿಗೊಡಲಿಲ್ಲ.