Jeremiah 34:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಬಾಬಿಲೋನಿನ ರಾಜನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡುತ್ತಿತ್ತು. ಬಾಬಿಲೋನಿನ ಸೈನ್ಯವು ತಾನು ಇನ್ನೂ ಸ್ವಾಧೀನಪಡಿಸಿಕೊಳ್ಳದ ಯೆಹೂದದ ನಗರಗಳ ವಿರುದ್ಧ ಕೂಡ ಹೋರಾಡುತ್ತಿತ್ತು. ಆ ಪಟ್ಟಣಗಳೆಂದರೆ ಲಾಕೀಷ್ ಮತ್ತು ಅಜೇಕ. ಯೆಹೂದದಲ್ಲಿ ಕೋಟೆಗಳನ್ನು ಹೊಂದಿದ್ದ ನಗರಗಳೆಂದರೆ ಇವೆರಡೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮಿಗೂ, ಯೆಹೂದದೊಳಗೆ ಕೋಟೆಕೊತ್ತಲದ ಪಟ್ಟಣಗಳಾಗಿ ಉಳಿದಿದ್ದ ಲಾಕೀಷಿಗೂ ಮತ್ತು ಅಜೇಕಕ್ಕೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಹೇಳಿದನು.
Kannada BSI Bible 2016
ಮನೆಗಳನ್ನು ಕಟ್ಟಬೇಡಿರಿ; ಬೀಜವನ್ನು ಬಿತ್ತಬೇಡಿರಿ; ದ್ರಾಕ್ಷೇ ತೋಟಗಳನ್ನು ನೆಡಬೇಡಿರಿ; ಅಂಥದ್ದು ನಿಮಗಿರಬಾರದು; ಆದರೆ ನೀವು ಪರಕೀಯರ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗಿರುವ ಹಾಗೆ ನಿಮ್ಮ ದಿನಗಳಲ್ಲೆಲ್ಲಾ ಗುಡಾರಗಳಲ್ಲಿ ವಾಸಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಬೆಲಿನ ಅರಸನ ಸೈನ್ಯವು ಯೆರೂಸಲೇವಿುಗೂ ಯೆಹೂದದೊಳಗೆ ಕೋಟೆಕೊತ್ತಲದ ಪಟ್ಟಣಗಳಿಗಾಗಿ ಉಳಿದಿದ್ದ ಲಾಕೀಷಿಗೂ ಅಜೇಕಕ್ಕೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಹೇಳಿದನು.
Kannada Bible (KNCL) BSI 2016
ಆಗ ಬಾಬಿಲೋನಿನ ಅರಸನ ಸೈನ್ಯವು ಜೆರುಸಲೇಮಿಗೂ ಮತ್ತು ಜುದೇಯದೊಳಗೆ ಕೋಟೆಕೊತ್ತಲದ ನಗರಗಳಾಗಿದ್ದ ಲಾಕೀಷಿಗೂ ಅಜೇಕಕ್ಕೂ ವಿರುದ್ಧ ಯುದ್ಧಮಾಡುತ್ತಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಬಿಲೋನಿನ ಅರಸನ ಸೈನ್ಯವು ಯೆರೂಸಲೇಮಿಗೂ ಯೆಹೂದದಲ್ಲಿ ಮಿಕ್ಕ ಸಮಸ್ತ ಪಟ್ಟಣಗಳಿಗೂ ಎಂದರೆ, ಲಾಕೀಷಿಗೂ ಅಜೇಕಕ್ಕೂ ವಿರೋಧವಾಗಿ ಯುದ್ಧ ಮಾಡಿದಾಗಲೇ ಹೇಳಿದನು. ಏಕೆಂದರೆ ಯೆಹೂದದ ಪಟ್ಟಣಗಳಲ್ಲಿ ಈ ಕೋಟೆಯುಳ್ಳ ಪಟ್ಟಣಗಳು ಮಾತ್ರ ನಿಂತಿದ್ದವು.