Jeremiah 37:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದಲ್ಲದೆ ಆಗ ಫರೋಹನ ಸೈನ್ಯವು ಈಜಿಪ್ಟಿನಿಂದ ಯೆಹೂದದ ಕಡೆಗೆ ಹೊರಟಿತ್ತು. ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಬಾಬಿಲೋನ್ ಸೈನ್ಯವು ಜೆರುಸಲೇಮ್ ನಗರಕ್ಕೆ ಮುತ್ತಿಗೆ ಹಾಕಿತ್ತು. ಆಗ ಈಜಿಪ್ಟಿನ ಸೈನ್ಯವು ತಮ್ಮ ಕಡೆ ಬರುತ್ತಿದೆ ಎಂಬ ಸಮಾಚಾರವು ಘಂದಿತು. ಅದನ್ನು ಕೇಳಿ ಬಾಬಿಲೋನಿನ ಸೈನ್ಯವು ಈಜಿಪ್ಟಿನ ಸೈನ್ಯವನೆಐದುರಿಸಲು ಜೆರುಸಲೇಮನ್ನು ಬಿಟ್ಟುಹೋಗಿತ್ತು.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತ್ತು; ಇದನ್ನು ಕೇಳಿ ಯೆರೂಸಲೇಮನ್ನು ಮುತ್ತಿದ್ದ ಕಸ್ದೀಯರು ಬಿಟ್ಟು ಹೋಗಿದ್ದರು.
Kannada BSI Bible 2016
ಆಗ ಅರಸನಾದ ಚಿದ್ಕೀಯನು ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡಬಲ್ಲವ ನಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತ್ತು; ಇದನ್ನು ಕೇಳಿ ಯೆರೂಸಲೇಮನ್ನು ಮುತ್ತಿದ್ದ ಕಸ್ದೀಯರು ಬಿಟ್ಟು ಹೋಗಿದ್ದರು.
Kannada Bible (KNCL) BSI 2016
ಅಷ್ಟರಲ್ಲಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತ್ತು. ಈ ಸಂಗತಿಯನ್ನು ಕೇಳಿ, ಜೆರುಸಲೇಮನ್ನು ಈಗಾಗಲೆ ಮುತ್ತಿದ್ದ ಬಾಬಿಲೋನಿಯದ ಸೈನಿಕರು ಅದನ್ನು ಬಿಟ್ಟುಹೋಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ, ಯೆರೂಸಲೇಮನ್ನು ಬಿಟ್ಟುಹೋದರು.