Jeremiah 37:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮ್ ನಿವಾಸಿಗಳೇ “ಬಾಬಿಲೋನ್ ಸೈನಿಕರು ಖಂಡಿತವಾಗಿಯೂ ನಮ್ಮನ್ನು ಬಿಟ್ಟುಹೋಗುವರು” ಎಂದು ನಿಮಗೆ ನೀವೇ ಹೇಳಿಕೊಂಡು ನಿಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳಬೇಡಿ, ಅವರು ನಿಮ್ಮನ್ನು ಬಿಟ್ಟುಹೋಗುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಇಂತೆನ್ನುತ್ತಾನೆ, “ಕಸ್ದೀಯರು ನಮ್ಮಿಂದ ತೊಲಗಿ ಹೋಗುವುದು ಖಂಡಿತ ಎಂದು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವುದೇ ಇಲ್ಲ.
Kannada BSI Bible 2016
ಅರಸನಾದ ನನ್ನೊ ಡೆಯನೇ, ಈ ಮನುಷ್ಯರು ಕುಣಿಯಲ್ಲಿ ಹಾಕಿದ ಪ್ರವಾ ದಿಯಾದ ಯೆರೆವಿಾಯನಿಗೆ ಮಾಡಿದ್ದೆಲ್ಲಾ ಕೇಡಿಗಾಗಿ ಮಾಡಿದ್ದಾರೆ; ಅವನು ಇರುವಲ್ಲಿ ಹಸಿವೆಯಿಂದ ಸಾಯುವವನಾಗಿದ್ದಾನೆ;
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಇಂತೆನ್ನುತ್ತಾನೆ - ಕಸ್ದೀಯರು ನಮ್ಮಿಂದ ತೊಲಗಿ ಹೋಗುವದು ಖಂಡಿತ ಎಂದು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವದೇ ಇಲ್ಲ.
Kannada Bible (KNCL) BSI 2016
ಸರ್ವೇಶ್ವರ ಇಂತೆನ್ನುತ್ತಾರೆ:- ಬಾಬಿಲೋನಿಯರು ನಿಮ್ಮಿಂದ ಖಂಡಿತವಾಗಿ ತೊಲಗಿಹೋಗುವರು ಎಂದುಕೊಂಡು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ಅವರು ಹೋಗುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಕಸ್ದೀಯರು ನಿಜವಾಗಿ ನಮ್ಮನ್ನು ಬಿಟ್ಟು ಹೋಗುವರು,’ ಎಂದುಕೊಂಡು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ; ಏಕೆಂದರೆ ಅವರು ತೊಲಗುವುದೇ ಇಲ್ಲ.