Jeremiah 38:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ರಾಜನಾದ ಚಿದ್ಕೀಯನು ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ, “ಅರಮನೆಯಿಂದ ಮೂರು ಜನರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು. ಯೆರೆಮೀಯನನ್ನು ಅವನು ಸಾಯುವ ಮುಂಚೆ ಬಾವಿಯಿಂದ ಮೇಲೆತ್ತು” ಎಂದು ಅಪ್ಪಣೆಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನು ಇದನ್ನು ಕೇಳಿ ಕೂಷ್ಯನಾದ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿಯನ್ನು ಕರೆದುಕೊಂಡುಹೋಗಿ ಪ್ರವಾದಿಯಾದ ಯೆರೆಮೀಯನು ಸಾಯುವುದರೊಳಗಾಗಿ ಅವನನ್ನು ಬಾವಿಯಿಂದ ಎತ್ತಿ ರಕ್ಷಿಸು” ಎಂದು ಅಪ್ಪಣೆಕೊಟ್ಟನು.
Kannada BSI Bible 2016
ಆದರೆ ಜನರೊಳಗೆ ಏನೂ ಇಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶ ದಲ್ಲಿ ಬಿಟ್ಟು ಅವರಿಗೆ ಆಗಲೇ ದ್ರಾಕ್ಷೇ ತೋಟಗಳನ್ನೂ ಹೊಲಗಳನ್ನೂ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನು ಇದನ್ನು ಕೇಳಿ ಕೂಷ್ಯನಾದ ಎಬೆದ್ಮೆಲೆಕನಿಗೆ - ನೀನು ಇಲ್ಲಿಂದ ಮೂವತ್ತು ಮಂದಿಯನ್ನು ಕರೆದುಕೊಂಡುಹೋಗಿ ಪ್ರವಾದಿಯಾದ ಯೆರೆಮೀಯನು ಸಾಯವದರೊಳಗಾಗಿ ಅವನನ್ನು ಬಾವಿಯಿಂದ ಎತ್ತಿಸು ಎಂದು ಅಪ್ಪಣೆಕೊಟ್ಟನು.
Kannada Bible (KNCL) BSI 2016
ಇದನ್ನು ಕೇಳಿದ ಅರಸನು ಸುಡಾನಿನ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿ ಆಳುಗಳನ್ನು ಕರೆದುಕೊಂಡು ಹೋಗಿ ಪ್ರವಾದಿ ಯೆರೆಮೀಯನು ಸಾಯುವ ಮೊದಲೇ, ಅವನನ್ನು ಬಾವಿಯಿಂದ ಎತ್ತಿಸು,” ಎಂದು ಅಪ್ಪಣೆಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನು ಕೂಷ್ಯನಾದ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿಯನ್ನು ಕರೆದುಕೊಂಡು ಹೋಗಿ, ಪ್ರವಾದಿಯಾದ ಯೆರೆಮೀಯನನ್ನು ಅವನು ಸಾಯುವುದಕ್ಕಿಂತ ಮುಂಚೆ ಬಾವಿಯೊಳಗಿಂದ ಮೇಲಕ್ಕೆತ್ತು,” ಎಂದು ಆಜ್ಞಾಪಿಸಿದನು.