Jeremiah 38:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದಕ್ಕೆ ಯೆರೆಮೀಯನು, “ನಾನು ಉತ್ತರಕೊಟ್ಟರೆ ನೀನು ಘಹುಶಃ ನನ್ನನ್ನು ಕೊಂದುಬಿಡುವೆ, ಸಲಹೆ ಕೊಟ್ಟರೆ ನೀನು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವದಿಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎನ್ನಲು ಯೆರೆಮೀಯನು ಚಿದ್ಕೀಯನಿಗೆ, “ನಾನು ನಿನಗೆ ತಿಳಿಸಿದರೆ ನನ್ನನ್ನು ಸಾಯಿಸಿಯೇ ಸಾಯಿಸುವಿ ಅಲ್ಲವೇ? ಆಲೋಚನೆ ಹೇಳಿದರೂ ನೀನು ಕೇಳುವುದಿಲ್ಲ” ಎಂದು ಉತ್ತರಕೊಟ್ಟನು.
Kannada BSI Bible 2016
ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಹಾಕ ಲ್ಪಟ್ಟಿರುವಾಗ ಕರ್ತನ ವಾಕ್ಯವು ಅವನಿಗೆ ಉಂಟಾಗಿ ಹೇಳಿದ್ದೇನಂದರೆ--
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರೆಮೀಯನು ಚಿದ್ಕೀಯನಿಗೆ - ನಾನು ನಿನಗೆ ತಿಳಿಸಿದರೆ ನನ್ನನ್ನು ಸಾಯಿಸಿಯೇ ಸಾಯಿಸುವಿ ಅಲ್ಲವೇ? ಆಲೋಚನೆಹೇಳಿದರೂ ನೀನು ಕೇಳುವದಿಲ್ಲ ಎಂದು ಉತ್ತರಕೊಟ್ಟನು.
Kannada Bible (KNCL) BSI 2016
ಯೆರೆಮೀಯನು ಚಿದ್ಕೀಯನಿಗೆ, “ನಾನು ತಮಗೆ ಇದ್ದದ್ದನ್ನು ಇದ್ದಹಾಗೆ ಹೇಳಿದರೆ ತಾವು ನನ್ನನ್ನು ಕೊಂದುಹಾಕುವುದು ನಿಶ್ಚಯವಲ್ಲವೆ? ನಾನು ತಮಗೆ ಬುದ್ಧಿವಾದ ಹೇಳಿದರೆ ತಾವು ಕೇಳುವುದಿಲ್ಲ,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆರೆಮೀಯನು ಚಿದ್ಕೀಯನಿಗೆ, “ನಾನು ನಿನಗೆ ತಿಳಿಸಿದರೆ, ನೀನು ನನ್ನನ್ನು ನಿಶ್ಚಯವಾಗಿ ಕೊಂದು ಹಾಕುವುದಿಲ್ಲವೋ? ನಾನು ನಿನಗೆ ಆಲೋಚನೆ ಹೇಳಿದರೆ, ನೀನು ನನ್ನನ್ನು ಕೇಳುವುದಿಲ್ಲ,” ಎಂದು ಹೇಳಿದನು.