Jeremiah 38:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ರಾಜನಾದ ಚಿದ್ಕೀಯನು ಯೆರೆಮೀಯನಿಗೆ ರಹಸ್ಯವಾಗಿ, “ಯೆರೆಮೀಯನೇ, ನಮಗೆ ಉಸಿರನ್ನೂ ಜೀವವನ್ನೂ ದಯಪಾಲಿಸಿದ ಯೆಹೋವನ ಆಣೆಯಾಗಿ ಹೇಳುತ್ತೇನೆ, ನಾನು ನಿನ್ನನ್ನು ಕೊಲ್ಲುವುದಿಲ್ಲ. ಕೊಲ್ಲಬಯಸುವ ಅಊಕಾರಿಗಳ ಕೈಗೂ ನಿನ್ನನ್ನು ಕೊಡುವದಿಲ್ಲವೆಂದು ನಾನು ಮಾತು ಕೊಡುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ಈ ಪ್ರಾಣವನ್ನು ನಮಗೆ ದಯಪಾಲಿಸಿದ ಯೆಹೋವನ ಜೀವದಾಣೆ, ನಾನು ನಿನ್ನನ್ನು ಸಾಯಿಸುವುದಿಲ್ಲ, ನಿನ್ನ ಪ್ರಾಣವನ್ನು ಹುಡುಕುವ ಇವರ ಕೈಗೂ ನಿನ್ನನ್ನು ಸಿಕ್ಕಿಸುವುದಿಲ್ಲ” ಎಂದು ರಹಸ್ಯವಾಗಿ ಪ್ರಮಾಣ ಮಾಡಿದನು.
Kannada BSI Bible 2016
ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನ ಸಂಗಡ ಮಾತನಾಡಿ ಹೇಳತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಒಳ್ಳೇದಕ್ಕಾಗಿ ಅಲ್ಲ, ಕೆಟ್ಟದ್ದಕ್ಕಾಗಿ ನನ್ನ ಮಾತುಗಳನ್ನು ಈ ಪಟ್ಟಣದ ಮೇಲೆ ಬರಮಾಡುತ್ತೇನೆ; ಅವು ಆ ದಿವಸದಲ್ಲಿ ನಿನ್ನ ಮುಂದೆಯೇ ಉಂಟಾಗುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅರಸನಾದ ಚಿದ್ಕೀಯನು ಯೆರೆಮೀಯನಿಗೆ - ಈ ಪ್ರಾಣವನ್ನು ನಮಗೆ ದಯಪಾಲಿಸಿದ ಯೆಹೋವನ ಜೀವದಾಣೆ, ನಾನು ನಿನ್ನನ್ನು ಸಾಯಿಸೆನು, ನಿನ್ನ ಪ್ರಾಣವನ್ನು ಹುಡುಕುವ ಇವರ ಕೈಗೂ ನಿನ್ನನ್ನು ಸಿಕ್ಕಿಸೆನು ಎಂದು ರಹಸ್ಯವಾಗಿ ಪ್ರಮಾಣಮಾಡಲು
Kannada Bible (KNCL) BSI 2016
ಅದಕ್ಕೆ ಅರಸ ಚಿದ್ಕೀಯನು, “ನಮಗೆ ಈ ಪ್ರಾಣವನ್ನು ದಯಪಾಲಿಸಿದ ಸರ್ವೇಶ್ವರನ ಜೀವದಾಣೆ, ನಾನು ನಿನ್ನನ್ನು ಕೊಂದುಹಾಕುವುದಿಲ್ಲ. ನಿನ್ನ ಪ್ರಾಣವನ್ನು ಹುಡುಕುವ ಈ ಜನರ ಕೈಗೂ ನಿನ್ನನ್ನು ಸಿಕ್ಕಿಸುವುದಿಲ್ಲ,” ಎಂದು ಗುಟ್ಟಾಗಿ ಪ್ರಮಾಣಮಾಡಿ ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಅರಸನಾದ ಚಿದ್ಕೀಯನು ಯೆರೆಮೀಯನಿಗೆ ಅಂತರಂಗದಲ್ಲಿ ಪ್ರಮಾಣಮಾಡಿ, “ನಮಗೆ ಈ ಪ್ರಾಣವನ್ನು ಉಂಟುಮಾಡಿದ ಯೆಹೋವ ದೇವರ ಜೀವದಾಣೆ, ನಾನು ನಿನ್ನನ್ನು ಕೊಂದುಹಾಕುವುದಿಲ್ಲ; ನಿನ್ನ ಪ್ರಾಣವನ್ನು ಹುಡುಕುವ ಈ ಮನುಷ್ಯರ ಕೈಯಲ್ಲಿ ಒಪ್ಪಿಸುವುದಿಲ್ಲ,” ಎಂದನು.