Jeremiah 38:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಯೆರೆಮೀಯನು ರಾಜನಾದ ಚಿದ್ಕೀಯನಿಗೆ ಹೀಗೆಂದನು: “ಇಸ್ರೇಲರ ದೇವರಾದ ಮತ್ತು ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಬಾಬಿಲೋನಿನ ರಾಜನ ಅಊಕಾರಿಗಳಿಗೆ ಶರಣಾಗತನಾದರೆ ನಿನ್ನ ಪ್ರಾಣವನ್ನು ಉಳಿಸಲಾಗುವುದು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲ್ಪಡುವುದಿಲ್ಲ. ನೀನೂ ಬಂದುಕುವೆ ಮತ್ತು ನಿನ್ನ ಕುಟುಂಘದವರೂ ಬಂದುಕುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೆರೆಮೀಯನು ಚಿದ್ಕೀಯನಿಗೆ, “ಸೇನಾಧೀಶ್ವರ ಸ್ವಾಮಿಯೂ ಇಸ್ರಾಯೇಲರ ದೇವರೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಬಾಬೆಲಿನ ಅರಸನ ಸರದಾರರನ್ನು ಮೊರೆಹೊಕ್ಕರೆ ನಿನ್ನ ಪ್ರಾಣ ಉಳಿಯುವುದು, ಈ ಪಟ್ಟಣವೂ ಬೆಂಕಿಯಿಂದ ಸುಟ್ಟು ಹೋಗದು, ನೀನೂ ನಿನ್ನ ಮನೆತನದವರೂ ಬದುಕುವಿರಿ.
Kannada BSI Bible 2016
ಆದರೆ ಆ ದಿನದಲ್ಲಿ ನಾನು ನಿನ್ನನ್ನು ಬಿಡುಗಡೆ ಮಾಡುವೆನೆಂದು ಕರ್ತನು ಅನ್ನುತ್ತಾನೆ; ನೀನು ಹೆದರಿಕೊಳ್ಳುವ ಮನುಷ್ಯರ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲ.ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು; ನೀನು ಕತ್ತಿಯಿಂದ ಬೀಳುವದಿಲ್ಲ; ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವದೆಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರೆಮೀಯನು ಚಿದ್ಕೀಯನಿಗೆ - ಸೇನಾಧೀಶ್ವರ ಸ್ವಾವಿುಯೂ ಇಸ್ರಾಯೇಲ್ಯರ ದೇವರೂ ಆದ ಯೆಹೋವನು ಇಂತೆನ್ನುತ್ತಾನೆ - ನೀನು ಬಾಬೆಲಿನ ಅರಸನ ಸರದಾರರನ್ನು ಮರೆಹೊಕ್ಕರೆ ನಿನ್ನ ಪ್ರಾಣವುಳಿಯುವದು, ಈ ಪಟ್ಟಣವೂ ಬೆಂಕಿಯಿಂದ ಸುಡದು, ನೀನೂ ನಿನ್ನ ಮನೆತನದವರೂ ಬದುಕುವಿರಿ;
Kannada Bible (KNCL) BSI 2016
ಆಗ ಯೆರೆಮೀಯನು, “ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲರ ದೇವರೂ ಆದ ಸ್ವಾಮಿ ಹೀಗೆನ್ನುತ್ತಾರೆ: ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳ ಮೊರೆಹೊಕ್ಕರೆ ತಮ್ಮ ಪ್ರಾಣ ಉಳಿಯುವುದು. ಈ ನಗರ ಬೆಂಕಿ ಇಂದ ಸುಟ್ಟುಹೋಗದು, ತಾವೂ ತಮ್ಮ ಮನೆಯವರೂ ಮನೆತನದವರೂ ಬದುಕುವಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆರೆಮೀಯನು ಚಿದ್ಕೀಯನಿಗೆ ಹೇಳಿದ್ದೇನೆಂದರೆ, “ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀನು ನಿಶ್ಚಯವಾಗಿ ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋದರೆ, ನಿನ್ನ ಪ್ರಾಣವು ಬದುಕುವುದು. ಈ ಪಟ್ಟಣವು ಬೆಂಕಿಯಿಂದ ಸುಡಲಾಗುವುದಿಲ್ಲ. ನೀನೂ, ನಿನ್ನ ಮನೆಯವರೂ ಬದುಕುವಿರಿ.