Jeremiah 38:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನ್ನು ಕೇಳಿದ ರಾಜಾಊಕಾರಿಗಳು ರಾಜನಾದ ಚಿದ್ಕೀಯನ ಬಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇನ್ನೂ ನಗರದಲ್ಲಿರುವ ಸೈನಿಕರನ್ನೂ ಎಲ್ಲರನ್ನೂ ತನ್ನ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಙೇಕೆಂದು ಅವನು ಬಯಸದೆ ಜೆರುಸಲೇಮಿನ ಜನರ ನಾಶನವನ್ನು ಬಯಸುತ್ತಾನೆ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಮೇಲೆ ಆ ಪ್ರಧಾನರು ಅರಸನಿಗೆ, “ಒಡೆಯಾ, ಇವನಿಗೆ ಮರಣ ದಂಡನೆಯಾಗಬೇಕು. ಇವನು ಪಟ್ಟಣದಲ್ಲಿ ಉಳಿದಿರುವ ಯೋಧರಿಗೂ ಸಕಲ ಜನರಿಗೂ ಇಂಥಾ ಮಾತುಗಳನ್ನು ಸಾರುತ್ತಾ ಅವರನ್ನು ಜೋಲುಗೈಯವರನ್ನಾಗಿ ಮಾಡುತ್ತಾನೆ; ಈ ಜನರ ಕ್ಷೇಮವನ್ನಲ್ಲ, ಹಾನಿಯನ್ನೇ ಹಾರೈಸುತ್ತಾನೆ” ಎಂದು ಹೇಳಿದರು.
Kannada BSI Bible 2016
ಆಗ ಆದದ್ದೇನಂದರೆ--ಯೆಹೂ ದದ ಅರಸನಾದ ಚಿದ್ಕೀಯನೂ ಯುದ್ಧಸ್ಥರೆಲ್ಲರೂ ಅವರನ್ನು ನೋಡಿದಾಗ ಓಡಿಹೋಗಿ ರಾತ್ರಿಯಲ್ಲಿ ಪಟ್ಟಣವನ್ನು ಅರಸನ ತೋಟದ ಮಾರ್ಗದಿಂದ ಬಿಟ್ಟು ಎರಡು ಗೋಡೆಗಳ ಮಧ್ಯದಲ್ಲಿರುವ ಬಾಗಲಿನಿಂದ ಹೊರಟರು;
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಆ ಪ್ರಧಾನರು ಅರಸನಿಗೆ - ಒಡೆಯಾ, ಇವನಿಗೆ ಮರಣದಂಡನೆಯಾಗಬೇಕು. ಇವನು ಪಟ್ಟಣದಲ್ಲಿ ಉಳಿದಿರುವ ಯೋಧರಿಗೂ ಸಕಲ ಜನರಿಗೂ ಇಂಥಾ ಮಾತುಗಳನ್ನು ನುಡಿಯುತ್ತಾ ಅವರನ್ನು ಜೋಲುಗೈಯವರನ್ನಾಗಿ ಮಾಡುತ್ತಾನೆ; ಈ ಜನರ ಕ್ಷೇಮವನ್ನಲ್ಲ, ಹಾನಿಯನ್ನೇ ಹಾರೈಸುತ್ತಾನೆ ಎಂದು ಹೇಳಿದರು.
Kannada Bible (KNCL) BSI 2016
ಈ ಪದಾಧಿಕಾರಿಗಳು ಅರಸನ ಬಳಿಗೆ ಬಂದು, “ಒಡೆಯಾ, ಈ ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇವನು ನಗರದಲ್ಲಿರುವ ಸೈನಿಕರಿಗೂ ಜನರೆಲ್ಲರಿಗೂ ಇಂಥ ಭವಿಷ್ಯವನ್ನು ನುಡಿಯುತ್ತಾ ಅವರು ಎದೆಗುಂದುವಂತೆ ಮಾಡುತ್ತಿದ್ದಾನೆ. ಅವನು ಹಾರೈಸುವುದು ಜನರ ಕ್ಷೇಮವನ್ನಲ್ಲ ಹಾನಿಯನ್ನೇ,” ಎಂದು ದೂರಿತ್ತರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಆ ಪ್ರಧಾನರು ಅರಸನಿಗೆ, “ಈ ಮನುಷ್ಯನು ಸಾಯಬೇಕು; ಇವನು ಅವರ ಸಂಗಡ ಇಂಥಾ ಮಾತುಗಳನ್ನು ಆಡಿ, ಈ ಪಟ್ಟಣದಲ್ಲಿ ಉಳಿದ ಎಲ್ಲಾ ಸೈನಿಕರನ್ನೂ, ಎಲ್ಲಾ ಜನರನ್ನೂ ಎದೆಗುಂದುವಂತೆ ಮಾಡುತ್ತಿದ್ದಾನೆ. ಈ ಮನುಷ್ಯನು ಈ ಜನರ ಕ್ಷೇಮವನ್ನಲ್ಲ, ಅವರ ಹಾನಿಯನ್ನೇ ಹಾರೈಸುತ್ತಾನೆ,” ಎಂದು ಹೇಳಿದರು.