Jeremiah 39:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜೆರುಸಲೇಮನ್ನು ಹೀಗೆ ವಶಪಡಿಸಿಕೊಳ್ಳಲಾಯಿತು: ಚಿದ್ಕೀಯನು ಯೆಹೂದದ ರಾಜನಾಗಿ ಆಳುತ್ತಿದ್ದ ಒಂಭತ್ತನೇ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ತನ್ನ ಇಡೀ ಸೈನ್ಯದೊಂದಿಗೆ ಜೆರುಸಲೇಮಿನ ಮೇಲೆ ಧಾಳಿ ಮಾಡಿದನು. ಅದನ್ನು ವಶಪಡಿಸಿಕೊಳ್ಳುವದಕ್ಕಾಗಿ ಅವನು ಆ ನಗರವನ್ನು ಮುತ್ತಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸಕಲ ಸೈನ್ಯಸಹಿತ ಬಂದು ಯೆರೂಸಲೇಮನ್ನು ಮುತ್ತಿದನು.
Kannada BSI Bible 2016
ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆರೆವಿಾಯನನ್ನು ಸಂಕೋಲೆ ಗಳಿಂದ ಕಟ್ಟಿಸಿ ಬಾಬೆಲಿಗೆ ಒಯ್ಯುವ ಯೆರೂಸಲೇಮಿನ ಮತ್ತು ಯೆಹೂದದ ಸೆರೆಯವರೆಲ್ಲರ ಮಧ್ಯದಲ್ಲಿ ತಕ್ಕೊಂಡುಹೋಗಿ ರಾಮದಲ್ಲಿ ಅವನನ್ನು ಬಿಡಿಸಿ ಅಲ್ಲಿಂದ ಕಳುಹಿಸಿದ ಮೇಲೆ ಯೆರೆವಿಾಯನಿಗೆ ಕರ್ತ ನಿಂದ ಉಂಟಾದ ವಾಕ್ಯವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಒಂಭತ್ತನೆಯ ವರುಷದ ಹತ್ತನೆಯ ತಿಂಗಳಿನಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸಕಲ ಸೈನ್ಯಸಹಿತ ಬಂದು ಯೆರೂಸಲೇಮನ್ನು ಮುತ್ತಿದನು.
Kannada Bible (KNCL) BSI 2016
ಜುದೇಯದ ಅರಸ ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಲ್ಲಿ ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ಸಕಲ ಸೈನ್ಯಸಮೇತ ಬಂದು ಜೆರುಸಲೇಮನ್ನು ಮುತ್ತಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೂದದ ಅರಸನಾದ ಚಿದ್ಕೀಯನ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯದೊಂದಿಗೆ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದನ್ನು ಮುತ್ತಿಗೆ ಹಾಕಿದರು.