Jeremiah 4:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹೊಲವನ್ನು ಕಾಯುವ ಜನರಂತೆ ವೈರಿಗಳು ಜೆರುಸಲೇಮನ್ನು ಮುತ್ತಿಕೊಂಡಿದ್ದಾರೆ. ಯೆಹೂದವೇ, ನೀನು ನನಗೆ ತಿರುಗಿಬಿದ್ದೆ, ಅದಕ್ಕಾಗಿ ನಿನ್ನ ಮೇಲೆ ಶತ್ರುಗಳು ಬೀಳುತ್ತಿದ್ದಾರೆ” ಎಂದು ಯೆಹೋವನು ಹೇಳುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ನಗರವು ನನಗೆ ತಿರುಗಿಬಿದ್ದ ಕಾರಣ ಅದನ್ನು ಹೊಲಕಾಯುವವರಂತೆ ಸುತ್ತಿಕೊಂಡಿದ್ದಾರೆ ಎಂದು ಯೆಹೋವನು ನುಡಿಯುತ್ತಾನೆ.
Kannada BSI Bible 2016
ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿ ದ್ದಾರೆ; ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ನಗರಿಯು ನನಗೆ ತಿರುಗಿಬಿದ್ದ ಕಾರಣ ಅದನ್ನು ಹೊಲಕಾಯುವವರಂತೆ ಸುತ್ತಿಕೊಂಡಿದ್ದಾರೆ ಎಂದು ಯೆಹೋವನು ಅನ್ನುತ್ತಾನೆ.
Kannada Bible (KNCL) BSI 2016
ಹೊಲ ಕಾಯುವವರಂತೆ ಅದನ್ನು ಸುತ್ತುಗಟ್ಟುವರು. ಏಕೆಂದರೆ ಅದರ ಜನರು ಸರ್ವೇಶ್ವರ ಸ್ವಾಮಿಗೇ ತಿರುಗಿಬಿದ್ದಿದ್ದಾರೆ. ಇದು ಆ ಸ್ವಾಮಿಯ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿದ್ದಾರೆ. ಏಕೆಂದರೆ ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು,’ ” ಎಂದು ಯೆಹೋವ ದೇವರು ಹೇಳುತ್ತಾರೆ.