Jeremiah 4:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ವಿನಾಶನದ ಮೇಲೆ ವಿನಾಶವು ಬಂದು ಇಡೀ ದೇಶವೇ ಹಾಳಾಗಿದೆ. ಫಕ್ಕನೆ ನನ್ನ ಗುಡಾರಗಳು ಹಾಳಾದವು. ನನ್ನ ಪರದೆಗಳು ಹರಿದುಹೋದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾಶದ ಮೇಲೆ ನಾಶವು, ಒಂದರ ಮೇಲೊಂದು ನಾಶದ ಸುದ್ದಿಬರುತ್ತಿದೆ; ದೇಶವೆಲ್ಲಾ ಹಾಳಾಯಿತು; ತಟ್ಟನೆ ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ಭಗ್ನವಾದವು.
Kannada BSI Bible 2016
ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾಶನದ ಮೇಲೆ ನಾಶನವು, ಒಂದರ ಮೇಲೊಂದು ನಾಶನದ ಸುದ್ದಿಬರುತ್ತಿದೆ; ದೇಶವೆಲ್ಲಾ ಹಾಳಾಯಿತು; ತಟ್ಟನೆ ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ಭಗ್ನವಾದವು;
Kannada Bible (KNCL) BSI 2016
ನಾಶನದ ಮೇಲೆ ನಾಶನದ ಸುದ್ದಿ, ನಾಡೆಲ್ಲ ಕಾಡಾಯಿತು. ದಿಢೀರೆಂದು ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ತುಂಡುತುಂಡಾದವು!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾಶನದ ಮೇಲೆ ನಾಶನದ ಸುದ್ದಿಬರುತ್ತಿದೆ. ದೇಶವೆಲ್ಲಾ ಹಾಳಾಯಿತು. ಫಕ್ಕನೆ ನನ್ನ ಗುಡಾರಗಳೂ, ಕ್ಷಣಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.