Jeremiah 4:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೂದದ ಜನರು ಕುದುರೆಗಳ, ಸವಾರರ, ಬಿಲ್ಲುಗಾರರ ಶಬ್ಧಗಳನ್ನು ಕೇಳಿ ಓಡಿಹೋಗುವರು. ಕೆಲವು ಜನರು ಗುಹೆಯಲ್ಲಿ ಅಡಗಿಕೊಳ್ಳುವರು. ಕೆಲವರು ಪೊದೆಗಳಲ್ಲಿ ಅವಿತುಕೊಳ್ಳುವರು. ಕೆಲವರು ಬೆಟ್ಟಗಳನ್ನು ಹತ್ತಿಹೋಗುವರು. ಯೆಹೂದದ ಎಲ್ಲಾ ನಗರಗಳು ಬರಿದಾಗುವವು. ಅಲ್ಲಿ ಒಬ್ಬರೂ ಇರುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪಟ್ಟಣದವರೆಲ್ಲರೂ ಸವಾರರ ಮತ್ತು ಬಿಲ್ಲುಗಾರರ ಆರ್ಭಟಕ್ಕೆ ಹೆದರಿ ಓಡುತ್ತಾರೆ; ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ, ಅತ್ತ ಬಂಡೆಗಳನ್ನು ಹತ್ತುತ್ತಾರೆ; ಪ್ರತಿಯೊಂದು ಪಟ್ಟಣವು ಯಾವ ನಿವಾಸಿಯೂ ಇಲ್ಲದೆ ನಿರ್ಜನವಾಗುತ್ತದೆ.
Kannada BSI Bible 2016
ರಾಹುತರ ಮತ್ತು ಬಿಲ್ಲಿನವರ ಶಬ್ದದ ನಿಮಿತ್ತ ಪಟ್ಟಣವೆಲ್ಲಾ ಓಡಿ ಹೋಗುವದು; ಅಡವಿಗಳಲ್ಲಿ ಹೊಕ್ಕು, ಬಂಡೆಗಳನ್ನು ಹತ್ತುವರು; ಪಟ್ಟಣಗಳೆಲ್ಲಾ ಬಿಡಲ್ಪಡುವವು ಅವುಗಳಲ್ಲಿ ಒಬ್ಬನಾದರೂ ವಾಸಮಾಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪಟ್ಟಣದವರೆಲ್ಲರೂ ಸವಾರರ ಮತ್ತು ಬಿಲ್ಲುಗಾರರ ಆರ್ಭಟಕ್ಕೆ ಹೆದರಿ ಓಡುತ್ತಾರೆ; ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ, ಅತ್ತ ಬಂಡೆಗಳನ್ನು ಹತ್ತುತ್ತಾರೆ; ಪ್ರತಿಯೊಂದು ಪಟ್ಟಣವು ಯಾವ ನಿವಾಸಿಯೂ ಇಲ್ಲದೆ ನಿರ್ಜನವಾಗುತ್ತದೆ.
Kannada Bible (KNCL) BSI 2016
ರಾಹುತರ ಹಾಗೂ ಬಿಲ್ಲುಗಾರರ ಅಬ್ಬರಕ್ಕೆ ಓಡುತ್ತಿರುವವರು ಪಟ್ಟಣಿಗರೆಲ್ಲರು ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ. ಅತ್ತ ಬಂಡೆಗಳನ್ನು ಹತ್ತುತ್ತಿದ್ದಾರೆ. ಪ್ರತಿಯೊಂದು ಪಟ್ಟಣ ಪಾಳುಬಿದ್ದ ಬೀಡು ಅದರಲ್ಲಿ ಮತ್ತೆ ವಾಸಮಾಡುವವರು ಒಬ್ಬರೂ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರಾವುತರ ಮತ್ತು ಬಿಲ್ಲಿನವರ ಶಬ್ದದ ನಿಮಿತ್ತ ಪಟ್ಟಣವೆಲ್ಲಾ ಓಡಿ ಹೋಗುವುದು. ಪೊದೆಗಳಲ್ಲಿ ಹೊಕ್ಕು, ಬಂಡೆಗಳನ್ನು ಹತ್ತುವರು. ಪಟ್ಟಣಗಳೆಲ್ಲಾ ನಾಶವಾಗುವುವು. ಅವುಗಳಲ್ಲಿ ಒಬ್ಬನಾದರೂ ವಾಸಮಾಡನು.