Jeremiah 4:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಚೀಯೋನಿನ ಕಡೆಗೆ ಧ್ವಜವನ್ನು ಎತ್ತಿ ಸಂಕೇತ ಕೊಡಿ. ನಿಲ್ಲಬೇಡಿ. ನಿಮ್ಮ ಜೀವ ರಕ್ಷಣೆಗಾಗಿ ಓಡಿರಿ. ನಾನು ಉತ್ತರದಿಂದ ವಿಪತ್ತನ್ನು ತರುತ್ತಿರುವುದರಿಂದ ನೀವು ಹೀಗೆ ಮಾಡಬೇಕು. ನಾನು ಭಯಂಕರವಾದ ವಿನಾಶವನ್ನುಟು ಮಾಡಲಿದ್ದೇನೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ, ತಡಮಾಡದೆ ವಲಸೆಹೋಗಿರಿ; ನಾನು ಉತ್ತರ ದಿಕ್ಕಿನಿಂದ ವಿಪತ್ತನ್ನು ಮತ್ತು ಘೋರನಾಶವನ್ನು ಬರಮಾಡುವೆನು.
Kannada BSI Bible 2016
ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ಹಿಂದಕ್ಕೆ ಹೋಗಿರಿ, ನಿಲ್ಲಬೇಡಿರಿ; ನಾನು ಉತ್ತರದಿಂದ ಕೇಡನ್ನೂ ದೊಡ್ಡ ನಾಶನವನ್ನೂ ತರುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ, ತಡಮಾಡದೆ ವಲಸೆಹೋಗಿರಿ; ನಾನು ಬಡಗಲಿಂದ ವಿಪತ್ತನ್ನೂ ಘೋರನಾಶನವನ್ನೂ ಬರಮಾಡುವೆನು.
Kannada Bible (KNCL) BSI 2016
ಸಿಯೋನಿನ ಕಡೆಗೆ ಧ್ವಜವನ್ನೆತ್ತಿರಿ. ತಡಮಾಡದೆ ವಲಸೆಹೋಗಿರಿ. ಸರ್ವೇಶ್ವರ ಉತ್ತರದಿಂದ ವಿಪತ್ತನ್ನೂ ಘೋರ ನಾಶವನ್ನೂ ಬರಮಾಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ವಿಳಂಬವಿಲ್ಲದೆ ಸುರಕ್ಷತೆಗಾಗಿ ಓಡಿಹೋಗಿರಿ. ಏಕೆಂದರೆ ನಾನು ಉತ್ತರದಿಂದ ಕೇಡನ್ನೂ, ದೊಡ್ಡ ನಾಶವನ್ನೂ ತರುತ್ತೇನೆ.”