Jeremiah 40:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಸಬತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಆ ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನಂತು ಮಿಚ್ಪದಲ್ಲಿ ವಾಸವಾಗಿದ್ದು ನಮ್ಮ ಬಳಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪಕ್ಷವನ್ನು ವಹಿಸುವೆನು; ನೀವು ದ್ರಾಕ್ಷಾರಸ, ಹಣ್ಣು, ಎಣ್ಣೆ, ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದ ಪಟ್ಟಣಗಳಲ್ಲಿ ವಾಸಿಸಿರಿ” ಎಂದು ಖಂಡಿತವಾಗಿ ಹೇಳಿದನು.
Kannada BSI Bible 2016
ಇಷ್ಮಾಯೇಲನು ಮಿಚ್ಪದ ಲ್ಲಿದ್ದ ಉಳಿದವರನ್ನೆಲ್ಲಾ ಅರಸನ ಕುಮಾರ್ತೆಯರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟ ಉಳಿದ ಜನರೆಲ್ಲರನ್ನೂ ಸೆರೆಯಾಗಿ ಒಯ್ದನು; ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು ಅಮ್ಮೋನ್ಯನ ಮಕ್ಕಳ ಬಳಿಗೆ ದಾಟಿ ಹೋಗು ವದಕ್ಕೆ ಹೊರಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನಂತು ವಿುಚ್ಪದಲ್ಲಿ ವಾಸವಾಗಿದ್ದು ನಮ್ಮ ಬಳಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪಕ್ಷವನ್ನು ವಹಿಸುವೆನು; ನೀವು ದ್ರಾಕ್ಷಾರಸ, ಹಣ್ಣು, ಎಣ್ಣೆ, ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದ ಪಟ್ಟಣಗಳಲ್ಲಿ ವಾಸಿಸಿರಿ ಎಂದು ಖಂಡಿತವಾಗಿ ಹೇಳಿದನು.
Kannada Bible (KNCL) BSI 2016
ನಾನಂತು ಮಿಚ್ಪದಲ್ಲಿ ವಾಸವಾಗಿರುವೆನು. ನಮ್ಮ ಬಳಿಗೆ ಬರುವ ಬಾಬಿಲೋನಿಯರ ಮುಂದೆ ನಿಮ್ಮ ಪ್ರತಿನಿಧಿಯಾಗಿರುವೆನು. ನೀವು ಹೋಗಿ ದ್ರಾಕ್ಷಾರಸ, ಹಣ್ಣು, ಎಣ್ಣೆ ಮುಂತಾದವುಗಳನ್ನು ಸಂಗ್ರಹಿಸಿ ನಿಮ್ಮ ಉಗ್ರಾಣಗಳಲ್ಲಿ ತುಂಬಿಸಿಡಿ. ನೀವು ಹಿಡಿದಿರುವ ಪಟ್ಟಣಗಳಲ್ಲೆ ವಾಸವಾಗಿರಿ,” ಎಂದು ಶಪಥಮಾಡಿ ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನಾದರೋ ಇಗೋ, ನಾನು ನಮ್ಮ ಬಳಿಗೆ ಬರುವ ಬಾಬಿಲೋನಿಯರ ಹತ್ತಿರ ಕಾದುಕೊಳ್ಳುವುದಕ್ಕೆ ಮಿಚ್ಪದಲ್ಲಿ ವಾಸಮಾಡುವೆನು. ಆದರೆ ನೀವು ದ್ರಾಕ್ಷಾರಸವನ್ನೂ, ಹಣ್ಣುಗಳನ್ನೂ, ಎಣ್ಣೆಯನ್ನೂ ಕೂಡಿಸಿ, ನಿಮ್ಮ ಪಾತ್ರೆಗಳಲ್ಲಿ ಇಟ್ಟು, ನೀವು ಹಿಡಿದಿರುವ ನಿಮ್ಮ ಪಟ್ಟಣಗಳಲ್ಲಿ ವಾಸವಾಗಿರಿ,” ಎಂಬುದು.