Jeremiah 40:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಊಪತಿಯಾದ ನೆಘೂಜರದಾನನು ಯೆರೆಮೀಯನನ್ನು ಕಂಡಾಗ ಅವನನ್ನು ಮಾತನಾಡಿಸಿ ಹೀಗೆಂದನು: “ಯೆರೆಮೀಯನೇ, ನಿಮ್ಮ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥಾ ದುಸ್ಥಿತಿ ಬರುವದೆಂದು ಸಾರಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಕಾವಲು ದಂಡಿನ ಅಧಿಪತಿಯು ಯೆರೆಮೀಯನನ್ನು ಕರೆಯಿಸಿ ಅವನಿಗೆ, “ನಿನ್ನ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥ ಕೆಡುಕಾಗಲಿ ಎಂದು ಶಾಪಕೊಟ್ಟನು.
Kannada BSI Bible 2016
ಆಗ ನೆತನ್ಯನ ಮಗನಾದ ಇಷ್ಮಾಯೇಲನು ತನ್ನ ಸಂಗಡ ಇದ್ದ ಹತ್ತು ಮಂದಿ ಮನುಷ್ಯರ ಸಹಿತವಾಗಿ ಎದ್ದು ಬಾಬೆಲಿನ ಅರಸನು ದೇಶದ ಮೇಲೆ ನೇಮಿಸಿದ್ದ ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದುಹಾಕಿ ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಕಾವಲು ದಂಡಿನ ಅಧಿಪತಿಯು ಯೆರೆಮೀಯನನ್ನು ಕರೆಯಿಸಿ ಅವನಿಗೆ - ನಿನ್ನ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥ ಕೆಡುಕಾಗಲಿ ಎಂದು ಶಾಪಕೊಟ್ಟನು;
Kannada Bible (KNCL) BSI 2016
ಆಗ ರಕ್ಷಾದಳದ ಆ ನಾಯಕ ಯೆರೆಮೀಯನನ್ನು ಕರೆಯಿಸಿ, “ನಿನ್ನ ದೇವರಾದ ಸರ್ವೇಶ್ವರನು ಈ ನಾಡಿಗೆ ಇಂಥ ಕೇಡು ಬಂದೊದಗಲಿ ಎಂದು ಶಾಪಹಾಕಿದ್ದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕಾವಲಿನವರ ಅಧಿಪತಿಯು ಯೆರೆಮೀಯನನ್ನು ಕರೆಯಿಸಿ, ಅವನಿಗೆ ಹೇಳಿದ್ದೇನೆಂದರೆ, “ನಿನ್ನ ದೇವರಾದ ಯೆಹೋವ ದೇವರು ಈ ಸ್ಥಳಕ್ಕೆ ಈ ಕೇಡನ್ನು ಪ್ರಕಟಿಸಿದ್ದಾರೆ. ಹೇಳಿದ ಪ್ರಕಾರವೇ ಯೆಹೋವ ದೇವರು ಅದನ್ನು ಬರಮಾಡಿದ್ದಾನೆ.