Jeremiah 42:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
‘ನೀವು ಯೆಹೂದದಲ್ಲಿ ವಾಸಮಾಡಿದರೆ ನಾನು ನಿಮ್ಮನ್ನು ನಾಶಮಾಡದೆ ಘಲಶಾಲಿಗಳನ್ನಾಗಿ ಮಾಡುತ್ತೇನೆ. ನಾನು ನಿಮ್ಮನ್ನು ನೆಡುತ್ತೇನೆ, ನಿಮ್ಮನ್ನು ಕೀಳುವುದಿಲ್ಲ. ನಾನು ನಿಮಗೆ ಬರಮಾಡಿದ ಭಯಂಕರವಾದ ಕೇಡಿಗಾಗಿ ದುಃಖಿತನಾಗಿದ್ದೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ನೀವು ಈ ದೇಶದಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡವುವುದಿಲ್ಲ; ನೆಡುವೆನು, ಕೀಳುವುದಿಲ್ಲ; ನಾನು ನಿಮಗೆ ಮಾಡಿದ ಕೇಡಿಗೆ ಪಶ್ಚಾತ್ತಾಪಪಡುತ್ತೇನೆ.
Kannada BSI Bible 2016
ಇಸ್ರಾ ಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು; ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಈ ದೇಶದಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡವುವದಿಲ್ಲ; ನೆಡುವೆನು, ಕೀಳುವದಿಲ್ಲ; ನಾನು ನಿಮಗೆ ಮಾಡಿದ ಕೇಡಿಗೆ ಪಶ್ಚಾತ್ತಾಪಪಡುತ್ತೇನೆ.
Kannada Bible (KNCL) BSI 2016
‘ನೀವು ಈ ನಾಡಿನಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡುವುದಿಲ್ಲ, ನೆಡುವೆನು, ಕೀಳುವುದಿಲ್ಲ, ನಾನು ನಿಮಗೆ ಮಾಡಿದ ಕೇಡಿಗಾಗಿ ವಿಷಾದಿಸುತ್ತೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
‘ನೀವು ಇನ್ನು ಈ ದೇಶದಲ್ಲಿ ವಾಸಮಾಡಿದರೆ, ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತು ಹಾಕದೆ ನೆಡುವೆನು. ಏಕೆಂದರೆ ನಾನು ನಿಮಗೆ ಮಾಡಿರುವ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಡುತ್ತೇನೆ.