Jeremiah 42:14 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
‘ಇಲ್ಲ, ನಾವು ಈಜಿಪ್ಟಿಗೆ ಹೋಗಿ ಅಲ್ಲಿ ವಾಸಮಾಡುವೆವು. ಅಲ್ಲಿ ನಮಗೆ ಯುದ್ಧದ ಭಯವಿಲ್ಲ. ಯುದ್ಧದ ತುತ್ತೂರಿಗಳ ಶಬ್ಧವು ಕೇಳುವುದಿಲ್ಲ; ಅಲ್ಲಿ ನಮಗೆ ಹಸಿವೆ ಇರುವುದಿಲ್ಲ’ ಎಂದು ನೀವು ಹೇಳಘಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೇಡವೇ ಬೇಡ; ನಾವು ಯುದ್ಧ ಕಾಣದೆ, ತುತ್ತೂರಿಯ ಶಬ್ದ ಕೇಳದೆ, ಅನ್ನದ ಕೊರತೆಯಿಂದ ಹಸಿವಾಗದೆ ಇರುವ ಐಗುಪ್ತ ದೇಶಕ್ಕೆ ಹೋಗಿ ಅಲ್ಲೇ ವಾಸಿಸುವೆವು’ ಎಂದುಕೊಂಡರೆ,
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ಯುದ್ಧಕಾಣದೆ ತುತೂರಿಯ ಶಬ್ದಕೇಳದೆ ಅನ್ನದ ಕೊರತೆಯಿಂದ ಹಸಿವೆಗೊಳ್ಳದೆ ಇರುವ ಐಗುಪ್ತದೇಶಕ್ಕೆ ಹೋಗಿ ಅಲ್ಲೇ ವಾಸಿಸುವೆವು ಎಂದುಕೊಂಡರೆ
Kannada Bible (KNCL) BSI 2016
ನಾವು ಈಜಿಪ್ಟಿನಲ್ಲೇ ವಾಸಮಾಡುತ್ತೇವೆ. ಅದು ಯುದ್ಧ ಕಾಣದ, ರಣಕಹಳೆ ಕೇಳದ, ಕೂಳಿನ ಕೊರತೆಯಿಲ್ಲದ ದೇಶ.’ ಎಂದುಕೊಳ್ಳಬೇಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು, ‘ಇಲ್ಲ, ನಾವು ಈಜಿಪ್ಟ್ ದೇಶಕ್ಕೆ ಹೋಗುತ್ತೇವೆ; ಅಲ್ಲಿ ನಾವು ಯುದ್ಧವನ್ನು ನೋಡುವುದಿಲ್ಲ, ತುತೂರಿಯ ಶಬ್ದವನ್ನು ಕೇಳುವುದಿಲ್ಲ, ರೊಟ್ಟಿಯ ವಿಷಯ ಕ್ಷಾಮವಾಗುವುದಿಲ್ಲ.’ ಅಲ್ಲಿ ವಾಸಮಾಡುವೆವೆಂದು ಹೇಳಿದರೆ,