Jeremiah 43:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯೆರೆಮೀಯನೇ, ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಹೂಳಿ ಗಾರೆಯಿಂದ ಮುಚ್ಚಿಬಿಡು. ಯೆಹೂದದ ಜನರ ಎದುರಿನಲ್ಲಿಯೇ ಹೀಗೆ ಮಾಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು, “ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಯೆಹೂದ್ಯರ ಕಣ್ಣೆದುರಿಗೆ ನೆಲಗಟ್ಟಿನ ಕೆಳಗೆ ಇಟ್ಟು ಗಾರೆಯಿಂದ ಮುಚ್ಚಿ ಬಿಟ್ಟು ಅವರಿಗೆ ಹೀಗೆ ಹೇಳು,
Kannada BSI Bible 2016
ಯೆಹೂದದ ದೇಶದಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡಿದಂಥ, ನಿಮ್ಮ ತಂದೆಗಳ ಕೆಟ್ಟತನಗಳನ್ನೂ ಯೆಹೂದದ ಅರಸರ ಕೆಟ್ಟತನಗಳನ್ನೂ ಅವರ ಹೆಂಡತಿಯರ ಕೆಟ್ಟತನಗಳನ್ನೂ ನಿಮ್ಮ ಸ್ವಂತ ಕೆಟ್ಟತನಗಳನ್ನೂ ನಿಮ್ಮ ಹೆಂಡತಿಯರ ಕೆಟ್ಟತನಗಳನ್ನೂ ಮರೆತು ಬಿಟ್ಟಿದ್ದೀರೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಯೆಹೂದ್ಯರ ಕಣ್ಣೆದುರಿಗೆ ನೆಲಗಟ್ಟಿನ ಕೆಳಗೆ ಇಟ್ಟು ಗಾರೆಯಿಂದ ಮುಚ್ಚಿಬಿಟ್ಟು ಅವರಿಗೆ ಹೀಗೆ ಹೇಳು -
Kannada Bible (KNCL) BSI 2016
“ನೀನು ದೊಡ್ಡ ಕಲ್ಲುಗಳನ್ನು ಎತ್ತಿಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಮುಂದೆ, ಯೆಹೂದ್ಯರ ಕಣ್ಣೆದುರಿಗೆ, ನೆಲಗಟ್ಟಿನ ಕೆಳಗೆ ಇಟ್ಟು, ಗಾರೆಯಿಂದ ಮುಚ್ಚಿಬಿಟ್ಟು, ಆ ಜನರಿಗೆ ಹೀಗೆಂದು ಹೇಳು:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದ್ಯರ ಮುಂದೆ ಬಚ್ಚಿಟ್ಟು, ಅವರಿಗೆ ಹೇಳತಕ್ಕದ್ದೇನೆಂದರೆ: