Jeremiah 44:13 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈಜಿಪ್ಟಿನಲ್ಲಿ ವಾಸಿಸಲು ಹೋದ ಜನರನ್ನು ನಾನು ದಂಡಿಸುವೆನು. ಅವರನ್ನು ದಂಡಿಸಲು ನಾನು ಖಡ್ಗಗಳನ್ನು, ಹಸಿವನ್ನು ಮತ್ತು ಭಯಂಕರವಾದ ವ್ಯಾಊಗಳನ್ನು ಘಳಸುವೆನು. ನಾನು ಜೆರುಸಲೇಮ್ ನಗರವನ್ನು ದಂಡಿಸಿದಂತೆಯೇ ಅವರನ್ನು ದಂಡಿಸುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಯೆರೂಸಲೇಮಿನವರನ್ನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸಿದಂತೆ ಐಗುಪ್ತದಲ್ಲಿ ವಾಸಿಸುವವರನ್ನೂ ದಂಡಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಯೆರೂಸಲೇವಿುನವರನ್ನು ಖಡ್ಗಕ್ಷಾಮವ್ಯಾಧಿಗಳಿಂದ ದಂಡಿಸಿದಂತೆ ಐಗುಪ್ತದಲ್ಲಿ ವಾಸಿಸುವವರನ್ನೂ ದಂಡಿಸುವೆನು;
Kannada Bible (KNCL) BSI 2016
ಜೆರುಸಲೇಮಿನವರನ್ನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ದಂಡಿಸಿದಂತೆ ಈಜಿಪ್ಟಿನಲ್ಲಿ ವಾಸಿಸುವವರನ್ನೂ ದಂಡಿಸುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಯೆರೂಸಲೇಮನ್ನು ಶಿಕ್ಷಿಸಿದ ಹಾಗೆ ಈಜಿಪ್ಟ್ ದೇಶದಲ್ಲಿ ವಾಸಮಾಡುವವರನ್ನು ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಶಿಕ್ಷಿಸುವೆನು.