Jeremiah 44:23 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಬೇರೆ ದೇವರುಗಳಿಗೆ ನೈವೇದ್ಯವನ್ನು ಅರ್ಪಿಸಿದ್ದಕ್ಕಾಗಿ ಆ ಕೇಡುಗಳೆಲ್ಲಾ ಸಂಭವಿಸಿದವು. ನೀವು ಯೆಹೋವನ ವಿರುದ್ಧ ಪಾಪಮಾಡಿದಿರಿ. ನೀವು ಯೆಹೋವನ ಆಜ್ಞಾಪಾಲನೆ ಮಾಡಲಿಲ್ಲ. ನೀವು ಆತನ ಉಪದೇಶಗಳನ್ನಾಗಲಿ ಅಥವಾ ಆತನು ಬೋಊಸಿದ ಧರ್ಮೋಪದೇಶಗಳನ್ನಾಗಲಿ ಅನುಸರಿಸಲಿಲ್ಲ. ನೀವು ಮಾಡಿಕೊಂಡ ಒಡಂಘಡಿಕೆಯಂತೆ ನಡೆಯಲಿಲ್ಲ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ, ನಿಬಂಧನೆಗಳನ್ನೂ, ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪ ಮಾಡಿ ಅನ್ಯದೇವತೆಗಳಿಗೆ ಧೂಪಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ” ಎಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ ನಿಬಂಧನೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪಮಾಡಿ [ಅನ್ಯದೇವತೆಗಳಿಗೆ] ಧೂಪ ಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ.
Kannada Bible (KNCL) BSI 2016
ನೀವು ಸರ್ವೇಶ್ವರ ಸ್ವಾಮಿಯ ಮಾತನ್ನು ಕೇಳದೆ, ಅವರ ಧರ್ಮಶಾಸ್ತ್ರವನ್ನೂ ನಿಬಂಧನೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸದೆ, ಪಾಪಮಾಡಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿದ್ದರಿಂದಲೇ ಇಂಥಾ ವಿಪತ್ತು ನಿಮಗೆ ಸಂಭವಿಸಿದೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಧೂಪ ಸುಟ್ಟು, ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಯೆಹೋವ ದೇವರ ಮಾತನ್ನು ಕೇಳದೆ, ದೈವನಿಯಮವನ್ನೂ, ದೈವತೀರ್ಪುಗಳನ್ನೂ, ದೈವಷರತ್ತುಗಳನ್ನೂ ಅನುಸರಿಸದೆ, ದೇವರಿಗೆ ವಿಧೇಯರಾಗದೆ ಇದ್ದುದರಿಂದಲೇ, ಈ ಕೇಡು ಈ ದಿನ ನಿಮಗೆ ಸಂಭವಿಸಿದೆ,” ಎಂದನು.