Jeremiah 44:26 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ, ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಎಲ್ಲಾ ಯೆಹೂದ್ಯರೇ, ಯೆಹೋವನ ಸಂದೇಶವನ್ನು ಕೇಳಿರಿ. ‘ನಾನು ಆಣೆಮಾಡಿ ಹೀಗೆ ಹೇಳುತ್ತೇನೆ. ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದಿಯರಲ್ಲಿ ಯಾರೊಬ್ಬರೂ ಇನ್ನು ಮುಂದೆ ನನ್ನ ಹೆಸರಿನ ಮೇಲೆ ಆಣೆಯಿಟ್ಟು ಹೇಳಲಾರರು ಎಂದು ನಾನು ನನ್ನ ಮಹತ್ತಾದ ನಾಮದ ಮೇಲೆ ಆಣೆಯಿಟ್ಟುಕೊಂಡು ಹೇಳುತ್ತೇನೆ. ಇನ್ನು ಮುಂದೆ ಎಂದೂ ಅವರು ‘ದೇವರ ಆಣೆಯಾಗಿ’ ಎಂದು ಹೇಳಲಾರರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಐಗುಪ್ತದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ; ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ಎತ್ತಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನು ಇರುವುದಿಲ್ಲ ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆಯಿಟ್ಟಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಐಗುಪ್ತದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ; ಯೆಹೋವನು ಇಂತೆನ್ನುತ್ತಾನೆ - ಆಹಾ, ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ಎತ್ತಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನಿರನು ಎಂಬದಾಗಿ ನನ್ನ ಮಹಾನಾಮದ ಮೇಲೆ ಆಣೆಯಿಟ್ಟಿದ್ದೇನೆ.
Kannada Bible (KNCL) BSI 2016
ಈಜಿಪ್ಟಿನಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರು ಸರ್ವೇಶ್ವರನಾದ ನಾನು ಹೇಳುವ ಮಾತನ್ನು ಕೇಳಿರಿ: ‘ಸರ್ವೇಶ್ವರನಾದ ದೇವರ ಜೀವದಾಣೆ’ ಎಂದು ನನ್ನ ಹೆಸರನ್ನು ಬಾಯಿಂದ ಉಚ್ಚರಿಸಲಿಕ್ಕೆ ಈಜಿಪ್ಟಿನಲ್ಲಿ ಯಾವ ಯೆಹೂದ್ಯನು ಇನ್ನಿರನು ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆ ಇಟ್ಟಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ, ಈಜಿಪ್ಟ್ ದೇಶದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವ ದೇವರ ವಾಕ್ಯವನ್ನು ಕೇಳಿರಿ: ‘ಇಗೋ, ನಾನು ನನ್ನ ಸ್ವಂತ ಹೆಸರಿನಿಂದ ಪ್ರಮಾಣ ಮಾಡಿದ್ದೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ, ‘ಈಜಿಪ್ಟ್‌ನಲ್ಲಿರುವ ಯಾವುದೇ ಯೆಹೂದದ ವ್ಯಕ್ತಿಯು ಪ್ರಮಾಣ ಮಾಡಲು ನನ್ನ ಶ್ರೇಷ್ಠ ಹೆಸರನ್ನು ಬಳಸಲು ಸಾಧ್ಯವಾಗುವುದಿಲ್ಲ. “ಸಾರ್ವಭೌಮ ಯೆಹೋವ ದೇವರ ಜೀವದಾಣೆ,” ಎಂದು ಮತ್ತೆಂದೂ ಅವರು ಹೇಳುವುದಿಲ್ಲ.