Jeremiah 44:27 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನಾನು ಯೆಹೂದದ ಜನರನ್ನು ಗಮನಿಸುತ್ತಿರುವುದು ಅವರನ್ನು ಕಾಪಾಡುವುದಕ್ಕಲ್ಲ. ನಾನು ಅವರನ್ನು ಗಮನಿಸುತ್ತಿರುವುದು ಅವರಿಗೆ ಕೇಡುಮಾಡುವುದಕ್ಕಾಗಿ. ಈಜಿಪ್ಟಿನಲ್ಲಿ ವಾಸಿಸುವ ಯೆಹೂದಿಯರು ಹಸಿವಿನಿಂದ ಸತ್ತುಹೋಗುವರು ಮತ್ತು ಖಡ್ಗಕ್ಕೆ ಘಲಿಯಾಗುವರು. ಅವರು ನಿರ್ನಾಮವಾಗುವವರೆಗೆ ಸಾಯುತ್ತಿರುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ಇವರಿಗೆ ಮೇಲನ್ನಲ್ಲ, ಕೇಡನ್ನೇ ಮಾಡಬೇಕೆಂದು ಎಚ್ಚರಗೊಂಡಿದ್ದೇನೆ; ಐಗುಪ್ತದಲ್ಲಿನ ಎಲ್ಲಾ ಯೆಹೂದ್ಯರು ಖಡ್ಗ, ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ಇವರಿಗೆ ಮೇಲನ್ನಲ್ಲ, ಕೇಡನ್ನೇ ಮಾಡಬೇಕೆಂದು ಎಚ್ಚರಗೊಂಡಿದ್ದೇನೆ; ಐಗುಪ್ತದಲ್ಲಿನ ಎಲ್ಲಾ ಯೆಹೂದ್ಯರು ಖಡ್ಗಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.
Kannada Bible (KNCL) BSI 2016
ಇಗೋ, ನಿಮಗೆ ಒಳಿತನ್ನು ಅಲ್ಲ, ಕೇಡನ್ನು ಬರಮಾಡಬೇಕೆಂದು ನಿಮ್ಮ ವಿಷಯದಲ್ಲಿ ಎಚ್ಚರಗೊಂಡಿದ್ದೇನೆ. ಈಜಿಪ್ಟಿನ ಎಲ್ಲ ಯೆಹೂದ್ಯರು ಖಡ್ಗ-ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಒಳ್ಳೆಯದಕ್ಕಾಗಿ ಅಲ್ಲ; ಕೆಟ್ಟದ್ದಕ್ಕಾಗಿ ಅವರ ಮೇಲೆ ಎಚ್ಚರವಾಗಿರುವೆನು. ಈಜಿಪ್ಟ್ ದೇಶದಲ್ಲಿರುವ ಯೆಹೂದದ ಮನುಷ್ಯರೆಲ್ಲರೂ ಮುಗಿದು ಅಂತ್ಯವಾಗುವವರೆಗೆ ಖಡ್ಗದಿಂದಲೂ ಬರದಿಂದಲೂ ನಾಶವಾಗುವರು.