Jeremiah 44:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಆ ಜನರು ಪ್ರವಾದಿಗಳ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರು ಆ ಪ್ರವಾದಿಗಳ ಕಡೆಗೆ ಗಮನ ಕೊಡಲಿಲ್ಲ. ಆ ಜನರು ತಮ್ಮ ದುಷ್ಟತನವನ್ನು ನಿಲ್ಲಿಸಲಿಲ್ಲ. ಅವರು ಬೇರೆ ದೇವರುಗಳಿಗೆ ಘಲಿ ಕೊಡುವುದನ್ನು ನಿಲ್ಲಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಕಿವಿಗೊಟ್ಟು ಕೇಳಲಿಲ್ಲ, ಅನ್ಯದೇವತೆಗಳಿಗೆ ಧೂಪಹಾಕುವುದನ್ನು ನಿಲ್ಲಿಸಲಿಲ್ಲ, ತಮ್ಮ ದುರಾಚಾರವನ್ನು ಬಿಡಲಿಲ್ಲ.
Kannada BSI Bible 2016
ಹಾಗಾದರೆ ನೀನು ನಿನಗೋಸ್ಕರ ಮಹತ್ತಾದವು ಗಳನ್ನು ಹುಡುಕುತ್ತೀಯೋ? ಹುಡುಕಬೇಡ; ಇಗೋ, ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಕರ್ತನು ಅನ್ನುತ್ತಾನೆ; ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನಿನಗೆ ಕೊಳ್ಳೆಯಾಗಿ ಕೊಡುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನ್ಯದೇವತೆಗಳಿಗೆ ಧೂಪಹಾಕುವದನ್ನು ನಿಲ್ಲಿಸಲಿಲ್ಲ, ತಮ್ಮ ದುರಾಚಾರವನ್ನು ಬಿಡಲಿಲ್ಲ.
Kannada Bible (KNCL) BSI 2016
ಆದರೂ ಅವರು ಕಿವಿಗೊಟ್ಟು ಕೇಳಲಿಲ್ಲ. ಅನ್ಯದೇವತೆಗಳಿಗೆ ಧೂಪಾರತಿ ಎತ್ತುವುದನ್ನು ನಿಲ್ಲಿಸಲಿಲ್ಲ. ತಮ್ಮ ದುರಾಚಾರವನ್ನು ಕೈಬಿಡಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ತಮ್ಮ ಕೆಟ್ಟತನದಿಂದ ತಿರುಗದೆ, ಬೇರೆ ದೇವರುಗಳಿಗೆ ಧೂಪಸುಡುವುದನ್ನು ಬಿಡದೆ ಕೇಳಲಿಲ್ಲ, ನೀವು ಕಿವಿಗೊಡಲಿಲ್ಲ.