Jeremiah 46:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಸಂದೇಶವು ಈಜಿಪ್ಟ್ ಜನಾಂಗದ ಬಗ್ಗೆ ಇದೆ. ಈ ಸಂದೇಶವು ಫರೋಹನೆಕೋವಿನ ಸೈನ್ಯದ ಬಗ್ಗೆ ಇದೆ. ಫರೋಹನೆಕೋವು ಈಜಿಪ್ಟಿನ ರಾಜನಾಗಿದ್ದನು. ಅವನ ಸೈನ್ಯವನ್ನು ಕರ್ಕೆಮೀಷ್ ಪಟ್ಟಣದಲ್ಲಿ ಸೋಲಿಸಲಾಯಿತು. ಕರ್ಕೆಮೀಷ್ ಪಟ್ಟಣವು ಯೂಫ್ರೇಟೀಸ್ ನದಿಯ ದಂಡೆಯ ಮೇಲಿದೆ. ಬಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ಯೆಹೂದದಲ್ಲಿ ಯೆಹೋಯಾಕೀಮನ ಆಳಿಬಕೆಯ ನಾಲ್ಕನೆಯ ವರ್ಷದಲ್ಲಿ ಫರೋಹನೆಕೋವಿನ ಸೈನ್ಯವನ್ನು ಕರ್ಕೆಮೀಷಿನಲ್ಲಿ ಸೋಲಿಸಿದನು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಈಜಿಪ್ಟಿಗೆ ಯೆಹೋವನ ಸಂದೇಶ ಹೀಗಿತ್ತು:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಐಗುಪ್ತವನ್ನು ಕುರಿತದ್ದು; ಐಗುಪ್ತದ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೆಟಿಸ್ ನದಿಯ ಬಳಿ ಕರ್ಕೆಮೀಷಿನಲ್ಲಿರುವಾಗ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಆ ಸೈನ್ಯವನ್ನು ಹೊಡೆದ ವಿಷಯ:
Kannada BSI Bible 2016
ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಪ್ರವಾಹಗಳು ಉತ್ತರದಿಂದ ಬರು ತ್ತವೆ, ಅವು ತುಂಬಿ ತುಳುಕುವ ಪ್ರಳಯವಾಗುವದು; ದೇಶವನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಅದರ ನಿವಾಸಿಗಳನ್ನೂ ಆಕ್ರಮಿಸುವವು, ಆಗ ಮನು ಷ್ಯರು ಕೂಗುವರು, ದೇಶದ ನಿವಾಸಿಗಳೆಲ್ಲರೂ ಗೋಳಾ ಡುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಐಗುಪ್ತವನ್ನು ಕುರಿತದ್ದು. ಐಗುಪ್ತದ ಅರಸನಾದ ಫರೋಹನೆಕೋವಿನ ಸೈನ್ಯವು ಯೂಫ್ರೇಟೀಸ್ ನದಿಯ ಬಳಿ ಕರ್ಕೆಮೀಷಿನಲ್ಲಿರುವಾಗ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳಿಕೆಯ ನಾಲ್ಕನೆಯ ವರುಷದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಆ ಸೈನ್ಯವನ್ನು ಹೊಡೆದ ವಿಷಯ.
Kannada Bible (KNCL) BSI 2016
ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಈಜಿಪ್ಟಿನ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೆಟಿಸ್ ನದಿಯ ಬಳಿ ಕರ್ಕೆಮೀಷಿನಲ್ಲಿ ಇರುವಾಗ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಆ ಸೈನ್ಯದ ಮೇಲೆ ದಾಳಿಮಾಡಿದ ವಿಷಯ:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈಜಿಪ್ಟನ್ನು ಕುರಿತದ್ದು: ಯೆಹೂದದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಈಜಿಪ್ಟಿನ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೇಟೀಸ್ ನದಿಯ ಬಳಿಯಿರುವ ಕರ್ಕೆಮೀಷಿನಲ್ಲಿ ಇರುವಾಗ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಆ ಸೈನ್ಯದ ಮೇಲೆ ದಾಳಿಮಾಡಿದ್ದರ ವಿಷಯ: