Jeremiah 46:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ವೇಗಶಾಲಿಗಳೂ ಓಡಿಹೋಗಲಾರರು. ಶೂರಸೈನಿಕರೂ ತಪ್ಪಿಸಿಕೊಳ್ಳಲಾರರು. ಅವರೆಲ್ಲರೂ ಎಡವಿ ಬಿದ್ದುಬಿಡುವರು. ಇದೆಲ್ಲ ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ನಡೆಯುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ವೇಗಶಾಲಿಗಳೂ ಓಡಿಹೋಗಲಾರರು, ಬಲಿಷ್ಠರೂ ತಪ್ಪಿಸಿಕೊಳ್ಳಲಾರರು. ಉತ್ತರ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಹತ್ತಿರ ಎಡವಿಬಿದ್ದಿದ್ದಾರೆ.
Kannada BSI Bible 2016
ಕರ್ತನ ಕತ್ತಿಯೇ, ಎಷ್ಟರ ವರೆಗೆ ವಿಶ್ರಮಿಸಿಕೊಳ್ಳದೆ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ! ವಿಶ್ರಮಿಸಿಕೋ, ಸುಮ್ಮನಿರು.ಅದು ಹೇಗೆ ಸುಮ್ಮನಿರುವದು? ಅಷ್ಕೆಲೋನಿಗೆ ವಿರೋಧವಾಗಿಯೂ ಸಮುದ್ರತೀರಕ್ಕೆ ವಿರೋಧ ವಾಗಿಯೂ ಕರ್ತನು ಅದಕ್ಕೆ ಆಜ್ಞೆ ಕೊಟ್ಟಿದ್ದಾನಲ್ಲಾ; ಅಲ್ಲಿ ಅದನ್ನು ನೇಮಿಸಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ವೇಗಶಾಲಿಗಳೂ ಓಡಿಹೋಗಲಾರರು, ಬಲಿಷ್ಠರೂ ತಪ್ಪಿಸಿಕೊಳ್ಳಲಾರರು; ಬಡಗಲಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಎಡವಿಬಿದ್ದಿದ್ದಾರೆ.
Kannada Bible (KNCL) BSI 2016
“ವೇಗಶಾಲಿಗಳು ಓಡಿಹೋಗಲಾರರು ಬಲಿಷ್ಟರು ತಪ್ಪಿಸಿಕೊಳ್ಳಲಾರರು. ಉತ್ತರದಲ್ಲಿ, ಯೂಫ್ರೆಟಿಸ್ ನದಿಯ ಹತ್ತಿರದಲ್ಲಿ, ಎಡವಿಬಿದ್ದಿರುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ವೇಗಶಾಲಿಗಳು ಓಡಿ ಹೋಗದಿರಲಿ; ಪರಾಕ್ರಮಶಾಲಿಯು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿಬೀಳುವರು.