Jeremiah 48:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಸಂದೇಶವು ಮೋವಾಙ್ ದೇಶವನ್ನು ಕುರಿತದ್ದು. ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ನೆಬೋ ಪರ್ವತಕ್ಕೆ ದುರ್ಗತಿ ಬರುವುದು. ನೆಬೋ ಪರ್ವತ ಪ್ರದೇಶವು ಹಾಳಾಗುವುದು. ಕಿರ್ಯಾತಯಿಮ್ ಪಟ್ಟಣವು ಸೋಲುವುದು. ಅದನ್ನು ವಶಪಡಿಸಿಕೊಳ್ಳಲಾಗುವುದು. ಭದ್ರವಾದ ಸ್ಥಳವನ್ನು ಸೋಲಿಸಿ ಧ್ವಂಸ ಮಾಡಲಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋವಾಬನನ್ನು ಕುರಿತು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ಅಯ್ಯೋ ನೆಬೋ ಊರಿನ ಗತಿಯನ್ನು ಏನು ಹೇಳಲಿ! ಅದು ಹಾಳಾಯಿತು; ಕಿರ್ಯಾತಯಿಮು ಶತ್ರುವಿನ ಕೈಗೆ ಸಿಕ್ಕಿ ಮಾನಭಂಗ ಹೊಂದಿದೆ, ಮಿಸ್ಗಾಬ್ ಕೆಡವಲ್ಪಟ್ಟು ಅವಮಾನಕ್ಕೆ ಗುರಿಯಾಗಿದೆ.
Kannada BSI Bible 2016
ಅಮ್ಮೋನ್ಯರ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿಗೆ ಕುಮಾರರಿ ಲ್ಲವೋ? ಅವನಿಗೆ ಬಾಧ್ಯನಿಲ್ಲವೋ? ಅವರ ಅರಸನು ಗಾದನ್ನು ಬಾಧ್ಯವಾಗಿ ತಕ್ಕೊಳ್ಳುವದು ಯಾಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವದು ಯಾಕೆ?
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋವಾಬನ್ನು ಕುರಿತದ್ದು. ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಅಯ್ಯೋ, ನೆಬೋಊರಿನ ಗತಿಯನ್ನು ಏನು ಹೇಳಲಿ! ಅದು ಹಾಳಾಯಿತು; ಕಿರ್ಯಾತಯಿಮು ಶತ್ರುವಿನ ಕೈಗೆ ಸಿಕ್ಕಿ ಮಾನಭಂಗಹೊಂದಿದೆ, ವಿುಸ್ಗಾಬ್ ಕೆಡವಲ್ಪಟ್ಟು ಅವಮಾನಕ್ಕೆ ಗುರಿಯಾಗಿದೆ.
Kannada Bible (KNCL) BSI 2016
ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಮೋವಾಬನ್ನು ಕುರಿತು ಹೀಗೆನ್ನುತ್ತಾರೆ: “ನೆಬೋ ಊರಿನ ಗತಿಯನ್ನು ಅಯ್ಯೋ, ಏನೆಂದು ಹೇಳಲಿ, ಅದು ಹಾಳಾಯಿತು. ಕಿರ್ಯತಯಿಮ್ ಮಾನಭಂಗ ಹೊಂದಿದೆ ಶತ್ರು ಕೈಗೆ ಸಿಕ್ಕಿ. ಮಿಸ್ಗಾಬ್ ಅವಮಾನಕ್ಕೆ ಗುರಿಯಾಗಿದೆ ನೆಲಸಮವಾಗಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋವಾಬನ್ನು ಕುರಿತದ್ದು: ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೆಬೋ ಊರಿನವರಿಗೆ ಕಷ್ಟ! ಆ ಊರು ಸೂರೆಯಾಯಿತು; ಕಿರ್ಯಾತಯಿಮು ಶತ್ರುವಿನ ಕೈವಶವಾಗಿ ಅವಮಾನಕ್ಕೆ ಗುರಿಯಾಗಿದೆ; ಬಲವಾದ ಕೋಟೆಯು ಸಹ ಚದರಿ ನಾಚಿಕೆಗೆ ಈಡಾಗಿದೆ.