Jeremiah 48:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೋವಾಘ್ಯರೇ, ನಿಮ್ಮ ಪಟ್ಟಣಗಳನ್ನು ಬಿಟ್ಟುಬಿಡಿ. ಹೋಗಿ, ಬೆಟ್ಟಗಳಲ್ಲಿ ವಾಸಿಸಿರಿ. ಗುಹೆಯ ಬಾಗಿಲಿನಲ್ಲಿ ತನ್ನ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತೆ ಆಗಿರಿ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋವಾಬ್ಯರೇ, ಪಟ್ಟಣಗಳನ್ನು ಬಿಟ್ಟು ಬಂಡೆಯ ಗುಹೆಗಳಲ್ಲಿ ವಾಸಿಸಿರಿ; ಹಳ್ಳಕೊಳ್ಳದ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತಿರಿ;
Kannada BSI Bible 2016
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊಡೆಯಲಿಕ್ಕಿರುವ ಕೇದಾರಿನ ವಿಷಯವಾಗಿಯೂ ಹಾಚೋರಿನ ರಾಜ್ಯಗಳ ವಿಷಯವಾಗಿಯೂ ಕರ್ತನು ಹೀಗೆ ಹೇಳುತ್ತಾನೆ--ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ! ಪೂರ್ವದಿಕ್ಕಿನ ಮನುಷ್ಯರನ್ನು ಸುಲು ಕೊಳ್ಳಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋವಾಬ್ಯರೇ, ಪಟ್ಟಣಗಳನ್ನು ಬಿಟ್ಟು ಬಂಡೆಯ ಗುಹೆಗಳಲ್ಲಿ ವಾಸಿಸಿರಿ; ಹಳ್ಳಕೊಳ್ಳದ ಆಚೆಯ ಪಕ್ಕೆಯಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತಿರಿ;
Kannada Bible (KNCL) BSI 2016
“ಮೋವಾಬ್ಯರೇ, ನಗರಗಳನ್ನು ಬಿಟ್ಟು ಹೋಗಿ ಬಂಡೆಗಳ ಗುಹೆಯಲ್ಲಿ ವಾಸಮಾಡಿ. ಹಳ್ಳಕೊಳ್ಳಗಳ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತೆ ಜೀವಿಸಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋವಾಬಿನಲ್ಲಿ ವಾಸವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರಿ; ಸಂದುಗಳ ಬಾಯಿಗಳ ಪಕ್ಕಗಳಲ್ಲಿ ಗೂಡು ಕಟ್ಟುವ ಪಾರಿವಾಳದ ಹಾಗಿರಿ.