Jeremiah 48:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹೊರೊನಯಿಮಿನಿಂದ ಬರುವ ಗೋಳಾಟದ ಧ್ವನಿಯನ್ನು ಕೇಳಿರಿ. ಅದು ವಿನಾಶದ ಮತ್ತು ಗೊಂದಲದ ಧ್ವನಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ಅಯ್ಯೋ, ಸೂರೆ ಹೋದೆವು, ಬಹು ನಾಶವಾದೆವು’ ಎಂಬ ಕೂಗಾಟವು ಹೊರೊನಯಿಮಿನಿಂದ ಕೇಳಬರುತ್ತದೆ!
Kannada BSI Bible 2016
ಹೆಷ್ಬೋನೇ, ಗೋಳಾಡು; ಆಯಿ ಹಾಳಾಯಿತು; ರಬ್ಬಾದ ಕುಮಾರ್ತೆಯರೇ ಕೂಗಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಅವರ ಅರಸನೂ ಅವನ ಯಾಜಕರೂ ಅವನ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಯ್ಯೋ, ಸೂರೆಹೋದೆವು, ಬಹು ನಾಶವಾದೆವು ಎಂಬ ಕೂಗಾಟವು ಹೊರೊನಯಿವಿುನಿಂದ ಕೇಳಬರುತ್ತದೆ!
Kannada Bible (KNCL) BSI 2016
‘ಅಯ್ಯೋ, ಸೂರೆಹೋದೆವು, ತೀವ್ರ ನಾಶವಾದೆವು!’ ಎಂಬ ಕೂಗಾಟ ಕೇಳಿಬರುತ್ತಿದೆ ಹೊರೊನಯಿಮಿನಿಂದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೊರೊನಯಿಮಿನಿಂದ ಕೂಗುವ ಸ್ವರವು, ಸೂರೆಯು, ದೊಡ್ಡ ನಾಶವು, ಹೊರಡುವುದು.