Jeremiah 48:30 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಹೀಗೆಂದನು: “ಘಹುಬೇಗ ಮೋವಾಬಿಗೆ ಕೋಪ ಬರುತ್ತದೆ. ಅವನು ಬಡಾಯಿ ಕೊಚ್ಚಿಕೊಳ್ಳುತ್ತಾನೆಂಬುದು ನನಗೆ ಗೊತ್ತು. ಆದರೆ ಅವನ ಘಡಾಯಿಗಳೆಲ್ಲ ಸುಳ್ಳು. ತಾನು ಹೇಳಿದಂತೆ ಮಾಡಲು ಅವನಿಂದಾಗದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಹೇಳುವುದೇನೆಂದರೆ, “ಅವರ ಗರ್ವೋದ್ರೇಕವು ನನಗೆ ಗೊತ್ತು, ಅದು ಬರೀ ಬುರುಡೆಯೇ; ಅವರು ಕೊಚ್ಚಿಕೊಳ್ಳುವುದೆಲ್ಲಾ ನಿರರ್ಥಕ.
Kannada BSI Bible 2016
ಹಾಚೋರಿನ ನಿವಾಸಿಗಳೇ, ಓಡಿಹೋಗಿರಿ, ದೂರಕ್ಕೆ ಹೋಗಿಬಿಡಿರಿ, ಆಳವಾದ ಸ್ಥಳದಲ್ಲಿ ವಾಸ ವಾಗಿರ್ರಿ ಎಂದು ಕರ್ತನು ಅನ್ನುತ್ತಾನೆ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ವಿರೋಧವಾಗಿ ಆಲೋಚನೆಯನ್ನೂ ಕಲ್ಪನೆಯನ್ನೂ ಮಾಡಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಹೇಳುವದೇನಂದರೆ - ಅವರ ಗರ್ವೋದ್ರೇಕವು ನನಗೆ ಗೊತ್ತು. ಅದು ಬರೀ ಬುರುಡೆಯೇ; ಅವರು ಕೊಚ್ಚಿಕೊಳ್ಳುವದೆಲ್ಲಾ ನಿರರ್ಥಕ ಎಂಬದೇ.
Kannada Bible (KNCL) BSI 2016
ಸರ್ವೇಶ್ವರನಾದ ನಾನು ಹೇಳುವುದೇನೆಂದರೆ: ಅವರ ಗರ್ವೋದ್ರೇಕ ನನಗೆ ಗೊತ್ತಿದೆ. ಅದು ಬರೀ ಬುರುಡೆ ಮಾತ್ರ. ಅವರು ಕೊಚ್ಚಿಕೊಳ್ಳುವುದೆಲ್ಲ ನಿರರ್ಥಕವೇ ಸರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅದರ ಕೋಪೋದ್ರೇಕವನ್ನು ಬಲ್ಲೆನೆಂದು, ಅದು ವ್ಯರ್ಥ”, ಎಂದು ಯೆಹೋವ ದೇವರು ಅನ್ನುತ್ತಾರೆ; “ಆದರೆ ಅದು ಹಾಗೆ ಆಗುವುದಿಲ್ಲ; ಅವನ ಸುಳ್ಳುಗಳು ಸರಿಬೀಳುವುದಿಲ್ಲ.