Jeremiah 48:35 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೋವಾಬಿನ ಜನರು ಪೂಜಾಸ್ಥಾನದಲ್ಲಿ ಧೂಪಹಾಕುವದನ್ನು ನಾನು ನಿಲ್ಲಿಸುತ್ತೇನೆ. ಅವರು ತಮ್ಮ ದೇವರುಗಳಿಗೆ ಬಲಿ ಅರ್ಪಿಸುವದನ್ನು ನಿಲ್ಲಿಸುತ್ತೇನೆ” ಎಂದು ಯೆಹೋವನು ನುಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋವಾಬಿನೊಳಗೆ ಪೂಜಾಸ್ಥಾನದಲ್ಲಿ ಬಲಿಯರ್ಪಿಸುವವರನ್ನೂ ತಮ್ಮ ದೇವರುಗಳಿಗೆ ಧೂಪಹಾಕುವವರನ್ನೂ ನಿರ್ಮೂಲಮಾಡುವೆನು. ಇದು ಯೆಹೋವನ ನುಡಿ.”
Kannada BSI Bible 2016
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ- ಇಗೋ, ನಾನು ಏಲಾಮಿನ ಬಿಲ್ಲನ್ನೂ ಅವರ ಪರಾ ಕ್ರಮವನ್ನೂ ಶ್ರೇಷ್ಠತ್ವವನ್ನೂ ಮುರಿಯುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋವಾಬಿನೊಳಗೆ ಪೂಜಾಸ್ಥಾನದಲ್ಲಿ ಬಲಿಯರ್ಪಿಸುವವರನ್ನೂ ತಮ್ಮ ದೇವರುಗಳಿಗೆ ಧೂಪಹಾಕುವವರನ್ನೂ ನಿರ್ಮೂಲ ಮಾಡುವೆನು. ಇದು ಯೆಹೋವನ ನುಡಿ.
Kannada Bible (KNCL) BSI 2016
“ಮೋವಾಬಿನ ಪೂಜಾಸ್ಥಾನಗಳಲ್ಲಿ ಬಲಿಯರ್ಪಿಸುವುದನ್ನೂ ತಮ್ಮ ದೇವರುಗಳಿಗೆ ಧೂಪಾರತಿಯೆತ್ತುವುದನ್ನೂ ನಿಲ್ಲಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ, ತನ್ನ ದೇವರುಗಳಿಗೆ ಧೂಪಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.