Jeremiah 48:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪ್ರತಿಯೊಂದು ಪಟ್ಟಣದ ಮೇಲೆ ವಿನಾಶಕನು ಧಾಳಿ ಮಾಡುವನು. ಒಂದು ಪಟ್ಟಣವೂ ತಪ್ಪಿಸಿಕೊಳ್ಳಲಾರದು. ಇಳಿಜಾರು ಪ್ರದೇಶವನ್ನು ನಾಶಪಡಿಸಲಾಗುವುದು. ಎತ್ತರದಲ್ಲಿದ್ದ ಪ್ರದೇಶವನ್ನು ಹಾಳುಮಾಡಲಾಗುವುದು. ಇದನ್ನು ಯೆಹೋವನೇ ಹೇಳಿರುವುದರಿಂದ ನೆರವೇರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೂರೆಗಾರನು ಪ್ರತಿಯೊಂದು ಪಟ್ಟಣದ ಮೇಲೆ ಬೀಳುವನು, ಯಾವ ಪಟ್ಟಣವೂ ಉಳಿಯದು; ಯೆಹೋವನು ನುಡಿದಂತೆಯೇ ತಗ್ಗಿನ ಭೂಮಿಯು ಹಾಳಾಗುವುದು, ಮೇಲ್ನಾಡೂ ನಾಶವಾಗುವುದು.
Kannada BSI Bible 2016
ದೇದಾನಿನ ನಿವಾಸಿಗಳೇ, ಓಡಿ ಹೋಗಿರಿ, ತಿರುಗಿಕೊಳ್ಳಿರಿ, ಆಳವಾದ ಸ್ಥಳದಲ್ಲಿ ವಾಸಮಾಡಿರಿ. ಏಸಾವಿನ ಆಪತ್ತನ್ನೂ ನಾನು ಅವನನ್ನು ವಿಚಾರಿಸುವ ಕಾಲವನ್ನು ಅವನ ಮೇಲೆ ಬರಮಾಡು ತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೂರೆಗಾರನು ಪ್ರತಿಯೊಂದು ಪಟ್ಟಣದ ಮೇಲೆ ಬೀಳುವನು, ಯಾವ ಪಟ್ಟಣವೂ ಉಳಿಯದು; ಯೆಹೋವನು ನುಡಿದಂತೆಯೇ ತಗ್ಗಿನ ಭೂವಿುಯು ಹಾಳಾಗುವದು, ಮೇಲ್ನಾಡೂ ನಾಶವಾಗುವದು.
Kannada Bible (KNCL) BSI 2016
ಸೂರೆಗಾರನು ಪ್ರತಿಯೊಂದು ನಗರದ ಮೇಲೆ ಬೀಳುವನು. ಯಾವ ಪಟ್ಟಣವೂ ಉಳಿಯದು. ಸರ್ವೇಶ್ವರನ ನುಡಿಯಂತೆಯೆ ಮೇಲ್ನಾಡು ನಾಶವಾಗುವುದು, ಬೈಲ್ನಾಡು ಹಾಳಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದೊಂದು ಪಟ್ಟಣದ ಮೇಲೆ ವಿನಾಶಕನು ಬರುವನು; ಯೆಹೋವ ದೇವರು ಹೇಳಿದ ಹಾಗೆಯೇ, ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳಲಾರದು. ತಗ್ಗೂ ಸಹ ನಾಶವಾಗುವುದು; ಮತ್ತು ಬಯಲು ಹಾಳಾಗುವುದು.