Jeremiah 49:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಮಸ್ಕ ನಗರವು ನಿಬರ್ಲವಾಗಿದೆ. ಜನರು ಓಡಿಹೋಗಬಯಸುತ್ತಾರೆ, ಜನರು ಗಾಬರಿಗೊಂಡಿದ್ದಾರೆ. ಪ್ರಸವವೇದನೆಪಡುವ ಸ್ತ್ರೀಯಂತೆ ಸಂಕಟಪಡುತ್ತಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಮಸ್ಕವು ಕುಂದಿದೆ, ಓಡಿಹೋಗಲು ಹಿಂದಿರುಗಿದೆ; ಅದಕ್ಕೆ ನಡುಕ ಹಿಡಿದಿದೆ, ಪ್ರಸವವೇದನೆಯಂತಿರುವ ಯಾತನೆ ಮತ್ತು ವ್ಯಥೆಗಳಿಗೆ ಒಳಗಾಗಿದೆ.
Kannada BSI Bible 2016
ನಾನು ಬೋನನ್ನು ಇಟ್ಟೆನು; ಹೌದು, ಬಾಬೆಲೇ ನೀನು ಹಿಡಿಯಲ್ಪಟ್ಟಿದ್ದೀ; ಆದರೆ ನಿನಗೆ ತಿಳಿಯದಿತ್ತು; ನೀನು ಕರ್ತನಿಗೆ ವಿರೋಧವಾಗಿ ಜಗಳವಾಡಿದ್ದ ರಿಂದಲೇ ಸಿಕ್ಕಿದ್ದೀ; ವಶಮಾಡಲ್ಪಟ್ಟಿದ್ದೀ;
Kannada BSI JV (ಕನ್ನಡ ಸತ್ಯವೇದವು J.V. (BSI))
ದಮಸ್ಕವು ಕುಂದಿದೆ, ಓಡಿಹೋಗಲು ಹಿಂದಿರುಗಿದೆ; ಅದಕ್ಕೆ ನಡುಕ ಹಿಡಿದಿದೆ, ಪ್ರಸವವೇದನೆಯಂತಿರುವ ಯಾತನಾವ್ಯಥೆಗಳಿಗೆ ಒಳಗಾಗಿದೆ.
Kannada Bible (KNCL) BSI 2016
ದಮಸ್ಕಸ್ ಕುಂದಿದೆ, ಓಡಿಹೋಗಲು ಸಿದ್ಧವಿದೆ. ಅದಕ್ಕೆ ನಡುಕ ಹುಟ್ಟಿದೆ. ಪ್ರಸವವೇದನೆಗೆ, ಕಷ್ಟಸಂಕಟಕ್ಕೆ ಅದು ಒಳಗಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಮಸ್ಕವು ನಿತ್ರಾಣವಾಯಿತು; ಓಡಿಹೋಗುವುದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡಿದುಕೊಂಡಿದೆ; ಹೆರುವ ಸ್ತ್ರೀಯ ಹಾಗೆ ಸಂಕಟವೂ, ವೇದನೆಗಳೂ ಅದನ್ನು ಹಿಡಿದಿವೆ.