Jeremiah 49:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ದಮಸ್ಕದ ಗೋಡೆಗಳಿಗೆ ನಾನು ಬೆಂಕಿ ಹಚ್ಚುವೆನು. ಆ ಬೆಂಕಿಯು ಬೆನ್‌ಹದದನ ಭದ್ರವಾದ ಕೋಟೆಯನ್ನು ಸುಟ್ಟುಹಾಕುವುದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನಾನು ದಮಸ್ಕದ ಕೋಟೆಯಲ್ಲಿ ಬೆಂಕಿಯನ್ನು ಹೊತ್ತಿಸುವೆನು, ಅದು ಬೆನ್ ಹದದನ ಅರಮನೆಗಳನ್ನು ದಹಿಸಿಬಿಡುವುದು” ಎಂದು ಸೇನಾಧೀಶ್ವರನಾದ ಯೆಹೋವನು ಅನ್ನುತ್ತಾನೆ.
Kannada BSI Bible 2016
ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ನಾನು ದಮಸ್ಕದ ಕೋಟೆಯಲ್ಲಿ ಬೆಂಕಿಯನ್ನು ಹೊತ್ತಿಸುವೆನು, ಅದು ಬೆನ್‍ಹದದನ ಅರಮನೆಗಳನ್ನು ದಹಿಸಿಬಿಡುವದು ಎಂದು ಸೇನಾಧೀಶ್ವರನಾದ ಯೆಹೋವನು ಅನ್ನುತ್ತಾನೆ.
Kannada Bible (KNCL) BSI 2016
ಆಗ ದಮಸ್ಕದ ಕೋಟೆಯಲ್ಲಿ ಬೆಂಕಿ ಹೊತ್ತಿಸುವೆನು. ಅದು ಬೆನ್‍ಹದದನ ಅರಮನೆಗಳನ್ನು ದಹಿಸಿಬಿಡುವುದು. ಇದು ಸರ್ವಶಕ್ತ ಸರ್ವೇಶ್ವರನಾದ ನನ್ನ ನುಡಿ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಏಕೆಂದರೆ ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವುದು.”