Jeremiah 49:35 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ಅತಿ ಶೀಘ್ರದಲ್ಲಿ ಏಲಾಮಿನ ಬಿಲ್ಲನ್ನು ಮುರಿದುಹಾಕುವೆನು. ಏಲಾಮಿಗೆ ಬಿಲ್ಲು ಘಹು ಮುಖ್ಯವಾದ ಆಯುಧವಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಏಲಾಮಿನ ಬಲವಾದ ಮುಖ್ಯ ಬಿಲ್ಲನ್ನು ಮುರಿದುಬಿಡುವೆನು.
Kannada BSI Bible 2016
ಕಸ್ದೀಯರಿಗೂ ಬಾಬೆಲಿನ ನಿವಾಸಿಗಳಿಗೂ ಅದರ ಪ್ರಧಾನರಿಗೂ ಜ್ಞಾನಿಗಳಿಗೂ ವಿರೋಧವಾಗಿ ಕತ್ತಿ ಉಂಟೆಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಏಲಾವಿುನ ಮುಖ್ಯ ಬಲವಾದ ಬಿಲ್ಲನ್ನು ಮುರಿದುಬಿಡುವೆನು.
Kannada Bible (KNCL) BSI 2016
ಸೇನಾಧೀಶ್ವರ ಸರ್ವೇಶ್ವರ ಹೀಗೆಂದರು - “ಇಗೋ, ಏಲಾಮಿನ ಮುಖ್ಯ ಬಲವಾದ ಬಿಲ್ಲನ್ನು ಮುರಿದುಬಿಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಗೋ, ನಾನು ಏಲಾಮಿನ ಬಿಲ್ಲನ್ನೂ, ಅವರ ಪರಾಕ್ರಮವನ್ನೂ, ಶ್ರೇಷ್ಠತ್ವವನ್ನೂ ಮುರಿಯುತ್ತೇನೆ