Jeremiah 5:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯೆಹೂದದ ದ್ರಾಕ್ಷಿಯ ಸಾಲುಘಳ್ಳಿಗಳ ಬಳಿಗೆ ಹೋಗಿರಿ, ಆ ಘಳ್ಳಿಗಳನ್ನು ಕತ್ತರಿಸಿರಿ. ಆದರೆ ಅವುಗಳನ್ನು ಸಂಪೂರ್ಣವಾಗಿ ನಾಶಮಾಡಬೇಡಿರಿ. ಅವುಗಳ ಎಲ್ಲಾ ಕೊಂಬೆಗಳನ್ನು ಕತ್ತರಿಸಿಬಿಡಿ. ಏಕೆಂದರೆ, ಈ ಕೊಂಬೆಗಳು ಯೆಹೋವನಿಗೆ ಸಂಬಂಧಿಸಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಚೀಯೋನೆಂಬ ದ್ರಾಕ್ಷಿ ತೋಟದ ಸಾಲುಗಿಡಗಳ ಮೇಲೆ ಬಿದ್ದು ಹಾಳುಮಾಡಿರಿ, ಆದರೆ ನಿರ್ಮೂಲಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ, ಅವು ಯೆಹೋವನವುಗಳಲ್ಲ.
Kannada BSI Bible 2016
ನಾನು ಯಾರ ಸಂಗಡ ಮಾತನಾಡಲಿ? ಅವರು ಕೇಳುವ ಹಾಗೆ ಯಾರನ್ನು ಎಚ್ಚರಿಸಲಿ? ಇಗೋ, ಅವರು ಆಲೈಸಲಾರದ ಹಾಗೆ ಅವರ ಕಿವಿ ಪರಿಛೇದನೆ ಯಿಲ್ಲದಾಗಿದೆ; ಇಗೋ, ಕರ್ತನ ವಾಕ್ಯವು ಅವರಿಗೆ ನಿಂದೆಯಾಗಿದೆ, ಅದರಲ್ಲಿ ಅವರಿಗೆ ಸಂತೋಷವಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಚೀಯೋನೆಂಬ ತೋಟದ ಸಾಲುಗಿಡಗಳ ಮೇಲೆ ಬಿದ್ದು ಹಾಳುಮಾಡಿರಿ, ಆದರೆ ನಿರ್ಮೂಲಮಾಡಬೇಡಿರಿ; ಅದರ ರೆಂಬೆಗಳನ್ನು ತೆಗೆದುಹಾಕಿರಿ, ಅವು ಯೆಹೋವನವುಗಳಲ್ಲ.
Kannada Bible (KNCL) BSI 2016
ಆಕ್ರಮಣಕಾರರಿಗೆ ಕರೆ; ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳ ದ್ರಾಕ್ಷಿತೋಟಗಳ ಮೂಲಕ ಹೋಗಿ ಅವುಗಳನ್ನು ಹಾಳುಮಾಡಿರಿ. ಆದರೆ ಸಂಪೂರ್ಣವಾಗಿ ನಾಶಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ ಏಕೆಂದರೆ ಅವು ಯೆಹೋವ ದೇವರಿಗೆ ಸೇರಿದವುಗಳಲ್ಲ.