Jeremiah 5:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇದು ಯೆಹೋವನ ಮಾತು: “ಇಸ್ರೇಲ್ ಮನೆತನವೇ, ನಿನ್ನ ಮೇಲೆ ಧಾಳಿ ಮಾಡುವುದಕ್ಕೆ ನಾನು ಘಹಳ ದೂರದಿಂದ ಒಂದು ಜನಾಂಗವನ್ನು ತರುತ್ತೇನೆ. ಅದು ಒಂದು ಘಲಿಷ್ಠ ಜನಾಂಗ; ಅದೊಂದು ಪುರಾತನ ಕಾಲದಿಂದ ಘಂದ ಜನಾಂಗ. ಆ ಜನಾಂಗದವರು ಮಾತನಾಡುವ ಭಾಷೆ ನಿನಗೆ ತಿಳಿಯುವದಿಲ್ಲ. ಅವರು ಹೇಳುವುದು ನಿನಗೆ ಅರ್ಥವಾಗುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ಇಸ್ರಾಯೇಲ್ ವಂಶವೇ, ಯೆಹೋವನ ಮಾತನ್ನು ಕೇಳು, ನಾನು ಒಂದು ಜನಾಂಗವನ್ನು ದೂರದಿಂದ ನಿಮ್ಮ ಮೇಲೆ ಬರಮಾಡುವೆನು. ಅದು ತಲತಲಾಂತರಗಳಿಂದ ಸ್ಥಿರವಾದ ಜನಾಂಗ, ಅದರ ಭಾಷೆಯು ನಿನಗೆ ತಿಳಿಯದು, ಅದು ಆಡುವ ಮಾತುಗಳನ್ನು ನೀನು ಗ್ರಹಿಸಲಾರೆ.
Kannada BSI Bible 2016
ಅಸಹ್ಯವನ್ನು ಮಾಡಿದ ಮೇಲೆ ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆಪಡ ಲಿಲ್ಲ; ಇಲ್ಲವೆ ಲಜ್ಜೆಯನ್ನು ಅರಿಯರು; ಆದದರಿಂದ ಅವರು ಬೀಳುವವರೊಳಗೆ ಬೀಳುವರು; ನಾನು ಅವ ರನ್ನು ವಿಚಾರಿಸುವ ಕಾಲದಲ್ಲಿ ಅವರು ಕೆಳಗೆ ಹಾಕ ಲ್ಪಡುವರು ಎಂದು ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ಇಸ್ರಾಯೇಲ್ ವಂಶವೇ, ಯೆಹೋವನ ಮಾತನ್ನು ಕೇಳು, ನಾನು ಒಂದು ಜನಾಂಗವನ್ನು ದೂರದಿಂದ ನಿಮ್ಮ ಮೇಲೆ ಬರಮಾಡುವೆನು; ಅದು ತಲತಲಾಂತರಗಳಿಂದ ಸ್ಥಿರವಾದ ಜನಾಂಗ, ಅದರ ಭಾಷೆಯು ನಿನಗೆ ತಿಳಿಯದು, ಅದು ಆಡುವ ಮಾತುಗಳನ್ನು ನೀನು ಗ್ರಹಿಸಲಾರೆ.
Kannada Bible (KNCL) BSI 2016
ಇಸ್ರಯೇಲ್ ವಂಶವೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಗಮನದಿಂದ ಕೇಳು: “ನಾನು ಒಂದು ರಾಷ್ಟ್ರವನ್ನು ದೂರದಿಂದ ನಿನ್ನ ವಿರುದ್ಧ ಬರಮಾಡುವೆನು. ಅದು ಪ್ರಾಚೀನ ಹಾಗೂ ಪ್ರಬಲ ರಾಷ್ಟ್ರ. ಅದರ ಭಾಷೆ ನಿನಗೆ ತಿಳಿಯದು. ಅದು ಆಡುವ ಮಾತು ನಿನಗೆ ಅರ್ಥವಾಗದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಹೀಗೆ ಹೇಳುತ್ತಾರೆ, “ಓ ಇಸ್ರಾಯೇಲ ಮನೆತನವೇ, ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆ. ಅದು ಬಲವಾದ ಜನಾಂಗವು. ಪೂರ್ವಕಾಲದ ಜನಾಂಗವು, ಆ ಜನಾಂಗದ ಭಾಷೆಯನ್ನು ನೀನರಿಯೆ; ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು.