Jeremiah 5:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಕಾಡಿನ ಸಿಂಹವು ಅವರ ಮೇಲೆರಗುವುದು, ಮರಳುಗಾಡಿನ ತೋಳವು ಅವರನ್ನು ಕೊಂದು ಬಿಡುವದು. ಅವರ ನಗರಗಳ ಹತ್ತಿರ ಚಿರತೆಯು ಅಡಗಿಕೊಂಡಿದೆ. ನಗರದಿಂದ ಹೊರಗೆ ಘಂದವರನೆಐಲ್ಲ ಅದು ಚೂರುಚೂರು ಮಾಡುವುದು. ಯೆಹೂದದ ಜನರು ಮತ್ತೆಮತ್ತೆ ಪಾಪಗಳನ್ನು ಮಾಡಿದ್ದರಿಂದ ಹೀಗಾಗುವದು. ಅವರು ಅನೇಕಸಲ ಯೆಹೋವನಿಂದ ದೂರ ಹೋಗಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವುದು, ಕಾಡಿನ ತೋಳವು ಕೊಳ್ಳೆ ಹೊಡೆಯುವುದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವುದು. ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.
Kannada BSI Bible 2016
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಮರಗಳನ್ನು ಕಡಿಯಿರಿ; ಯೆರೂಸಲೇಮಿಗೆ ವಿರೋಧವಾಗಿ ದಿಬ್ಬ ಹಾಕಿರಿ; ವಿಚಾರಿಸಲ್ಪಡತಕ್ಕ ಪಟ್ಟಣವು ಇದೇ; ಅವಳಲ್ಲಿ ತುಂಬ ಬಲಾತ್ಕಾರ ಅದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವದು, ಕಾಡಿನ ತೋಳವು ಕೊಳ್ಳೆಮಾಡುವದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವದು; ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.
Kannada Bible (KNCL) BSI 2016
ಆದಕಾರಣ ಅಡವಿಯ ಸಿಂಹ ಅವರನ್ನು ಕೊಲ್ಲುವುದು ಕಾಡಿನ ತೋಳ ಕೊಳ್ಳೆಹೊಡೆಯುವುದು ಚಿರತೆ ಅವರ ಪಟ್ಟಣಗಳಿಗೆ ಹೊಂಚುಹಾಕುವುದು ಅಲ್ಲಿಂದ ಹೊರಬರುವ ಪ್ರತಿಯೊಬ್ಬನನ್ನು ಸೀಳುವುದು. ಅವರ ಅಪರಾಧಗಳೋ ಬಹಳ, ಅವರ ದ್ರೋಹಗಳೋ ಅಪಾರ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗಿರುವುದರಿಂದ ಅಡವಿಯ ಸಿಂಹವು ಅವರನ್ನು ದಾಳಿಮಾಡುವುದು. ಕಾಡಿನ ತೋಳವು ಅವರನ್ನು ಸೂರೆಮಾಡುವುದು. ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವುದು. ಅಲ್ಲಿಂದ ಹೊರಗೆ ಬರುವವರೆಲ್ಲರೂ ಸೀಳಲಾಗುವರು. ಏಕೆಂದರೆ, ಅವರ ದ್ರೋಹಗಳು ಬಹಳವಾಗಿವೆ. ಅವರ ಹಿಂಜಾರುವಿಕೆಯು ಹೆಚ್ಚಾಗಿವೆ.