Jeremiah 50:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಾಬಿಲೋನಿನ ಜನರಿಗೆ ಬೀಜಗಳನ್ನು ಬಿತ್ತಲು ಬಿಡಙೇಡಿ. ಸುಗ್ಗಿ ಮಾಡಲು ಅವರಿಗೆ ಬಿಡಬೇಡಿ. ಬಾಬಿಲೋನಿನ ಸೈನಿಕರು ಹಲವಾರು ಸೆರೆಯಾಳುಗಳನ್ನು ಹಿಡಿದುತಂದಿದ್ದಾರೆ. ಈಗ ಶತ್ರು ಸೈನಿಕರು ಬಂದುದರಿಂದ ಆ ಸೆರೆಯಾಳುಗಳು ತಮ್ಮ ಪ್ರದೇಶಗಳಿಗೆ ಹಿಂತಿರುಗುತ್ತಿದ್ದಾರೆ, ಆ ಸೆರೆಯಾಳುಗಳು ತಮ್ಮ ದೇಶಗಳಿಗೆ ಓಡುತ್ತಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೀಜ ಬಿತ್ತುವವನನ್ನೂ ಮತ್ತು ಸುಗ್ಗಿಯಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನಿಂದ ನಿರ್ಮೂಲಮಾಡಿರಿ; ಪ್ರತಿಯೊಬ್ಬ ವಿದೇಶೀಯನು ಹಿಂಸೆಯ ಖಡ್ಗದ ದೆಸೆಯಿಂದ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.
Kannada BSI Bible 2016
ಆತನು ತನ್ನ ಶಬ್ದವನ್ನು ಎತ್ತುವಾಗ ಆಕಾಶದಲ್ಲಿ ನೀರಿನ ಘೋಷವದೆ; ಆತನು ಭೂಮಿಯ ಅಂತ್ಯದಿಂದ ಹಬೆಯನ್ನು ಏರ ಮಾಡುತ್ತಾನೆ; ಮಳೆಯ ಸಂಗಡ ಮಿಂಚುಗಳನ್ನು ಮಾಡಿ ತನ್ನ ಭಂಡಾರಗಳೊ ಳಗಿಂದ ಗಾಳಿಯನ್ನು ಹೊರಗೆ ತರುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೀಜಬಿತ್ತುವವನನ್ನೂ ಸುಗ್ಗಿಯಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನಿಂದ ನಿರ್ಮೂಲಮಾಡಿರಿ; ಪ್ರತಿಯೊಬ್ಬ ವಿದೇಶೀಯನು ಹಿಂಸೆಯ ಖಡ್ಗದ ದೆಸೆಯಿಂದ ಸ್ವಜನದ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.
Kannada Bible (KNCL) BSI 2016
ಬೀಜಬಿತ್ತುವವನಾಗಲಿ, ಸುಗ್ಗಿಯಲ್ಲಿ ಕುಡುಗೋಲು ಹಿಡಿಯುವವನಾಗಲಿ ಆ ಬಾಬಿಲೋನಿನಲ್ಲಿ ಇಲ್ಲದಂತೆ ಮಾಡಿ. ಪ್ರತಿಯೊಬ್ಬ ವಿದೇಶಿಯನು ಹತ್ಯಮಾಡುವ ಆ ಖಡ್ಗದ ಮುಂದೆ ನಿಲ್ಲಲಾಗದೆ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಿತ್ತುವವನನ್ನೂ, ಸುಗ್ಗಿಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬಿಲೋನಿನೊಳಗಿಂದ ಕಡಿದುಬಿಡಿರಿ; ಕಷ್ಟಪಡುವ ಖಡ್ಗದ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿಹೋಗುವರು.