Jeremiah 50:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಇಸ್ರೇಲು ದೇಶಗಳಲ್ಲೆಲ್ಲಾ ಚದರಿಹೋದ ಕುರಿಹಿಂಡಿನಂತಾಗಿದೆ. ಸಿಂಹಗಳಿಗೆ ಹೆದರಿ ಓಡಿಹೋದ ಕುರಿಗಳಂತಾಗಿದೆ ಇಸ್ರೇಲು. ಅದನ್ನು ತಿಂದು ಮುಗಿಸಿದ ಮೊದಲನೆ ಸಿಂಹವೆಂದರೆ ಅಶ್ಶೂರದ ರಾಜನು. ಅದರ ಎಲುಬುಗಳನ್ನು ಜಗಿದ ಕೊನೆಯ ಸಿಂಹವೆಂದರೆ ಬಾಬಿಲೋನಿನ ರಾಜನಾದ ನೆಘೂಕದೆಐಚ್ಚರನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲು ಚದರಿಹೋದ ಕುರಿ ಹಿಂಡು; ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ; ಮೊಟ್ಟಮೊದಲು ಅಶ್ಶೂರದ ಅರಸನು ಅದನ್ನು ತಿಂದನು, ಕಟ್ಟಕಡೆಗೆ ಈಗ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು.
Kannada BSI Bible 2016
ಮನುಷ್ಯ ರೆಲ್ಲರೂ ತಮ್ಮ ತಿಳುವಳಿಕೆಯಿಂದ ಮೂಢರಾಗಿದ್ದಾರೆ; ಎರಕ ಹೊಯ್ಯುವವರೆಲ್ಲರೂ ವಿಗ್ರಹದಿಂದ ನಾಚಿಕೆ ಪಡುತ್ತಾರೆ; ಅವರ ಎರಕದ ಬೊಂಬೆಗಳು ಸುಳ್ಳೇ; ಅವುಗಳಲ್ಲಿ ಉಸಿರು ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲು ಚದರಿಹೋದ ಹಿಂಡು; ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ; ಮೊಟ್ಟಮೊದಲು ಅಶ್ಶೂರದ ಅರಸನು ಅದನ್ನು ತಿಂದನು, ಕಟ್ಟಕಡೆಗೆ ಈಗ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು.
Kannada Bible (KNCL) BSI 2016
“ಇಸ್ರಯೇಲ್ ಚದರಿಹೋದ ಮಂದೆ. ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ. ಮೊಟ್ಟಮೊದಲು ಅಸ್ಸೀರಿಯಾದ ಅರಸನು ಅದನ್ನು ಕಬಳಿಸಿದನು. ಕಟ್ಟಕಡೆಗೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಇಸ್ರಾಯೇಲನು ಚದರಿಹೋದ ಕುರಿಯಾಗಿದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಸ್ಸೀರಿಯನ ಅರಸನು ಅವನನ್ನು ತಿಂದುಬಿಟ್ಟನು. ಕಡೆಯಲ್ಲಿ ಬಾಬಿಲೋನಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.”